ಬಂಟ್ವಾಳ: ಜಿ.ಎಚ್.ಎಮ್ ಫೌಂಡೇಶನ್ ಮುಲಾರಪಟ್ನ ಇವರ ವತಿಯಿಂದ ನೂತನ ಮನೆ ಹಸ್ತಾಂತರ, ಕಚೇರಿ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸಹಾಯ ಧನ ವಿತರಣಾ ಕಾರ್ಯಕ್ರಮ ಮಾರ್ಗದಂಗಡಿ ಎಂಬಲ್ಲಿ ನಡೆಯಿತು.
ಜಿಲ್ಲಾ ಖಾಝಿ ಬಹು! ಶೈಖುನಾ ತ್ವಾಕಾ ಆಹಮ್ಮದ್ ಮುಸ್ಲಿಯಾರ್ ಆಲ್ ಅಝ್ಜರಿ ದುಆ- ಆಶೀರ್ವಚನ ನೀಡಿದರು.

ಜಿ.ಎಚ್.ಎಮ್ ಫೌಂಡೇಶನ್ ಮುಲಾರಪಟ್ನ (1)
ಫೌಂಡೇಶನ್ ವತಿಯಿಂದ ಸುಮಾರು ಏಳು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯನ್ನು ಫಲಾನುಭವಿಗೆ ಕೀ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ ದ ಅವರು ದೀನದಲಿತರಿಗೆ , ಬಡವರಿಗೆ , ಅಸಹಾಯಕರಿಗೆ ಸಹಾಯ ಮಾಡುವ ಇಂತಹ ಸಂಘಟನೆಗಳ ಯುವಕರಿಗೆ ಭಗವಂತನ ಅನುಗ್ರಹವಿದೆ. ಇನ್ನೋಬ್ಬರ ನೋವಿಗೆ ಸ್ಪಂದಿಸುವ ಇವರ ಮಾನವೀಯ ಗುಣಗಳು ಸಮಾಜಕ್ಕೆ ಮಾದರಿ ಎಂದು ಅವರು ಹೇಳಿದರು.

ಜಿ.ಎಚ್.ಎಮ್ ಫೌಂಡೇಶನ್ ಮುಲಾರಪಟ್ನ (3)
ಜಿ.ಹೆಚ್.ಎಂ.ಫೌಂಡೇಶನ್ ಅಧ್ಯಕ್ಷ ಹಂಝ ಗುತ್ತು ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು. ಫೌಂಡೇಶನ್ ನಡೆದು ಬಂದು ದಾರಿಯ ಬಗ್ಗೆ ಹಾಗೂ ಮುಂದಿನ ಯೋಜನೆ ಗಳ ಪೂರ್ಣಮಾಹಿತಿಯನ್ನೊಳಗೊಂಡ ಕೈ ಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಜಿ.ಎಚ್.ಎಮ್ ಫೌಂಡೇಶನ್ ಮುಲಾರಪಟ್ನ (4)
ಈ ಸಂದರ್ಭದಲ್ಲಿ ಮುಲಾರಪಟ್ನ ಎಂ.ಜೆ.ಎಮ್ ಖತೀಬರಾದ ಬಹು! ಅಲ್ ಹಾಜ್ ಪಿ.ಅಬ್ದುಲ್ ಖಾದರ್ ಮದನಿ ಮಂಗಳೂರು ತಾ.ಪಂ.ಸದಸ್ಯ ನಾಗೇಶ್ ಶೆಟ್ಟಿ , ವಾರ್ತ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ, ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಉಸ್ಮಾನ್ , ನಂಡೆ ಪೆಂಜಳ್ ಮ್ಯಾರೇಜ್ ಅಭಿಯಾನ ದ ಅದ್ಯಕ್ಷ ನೌಶಾದ್ ಹಾಜಿ, ಮೂಲರಪಟ್ನ ಮೌಲಾನ ಆಝಾದ್ ಮಾದರಿ ಶಾಲೆಯ ಪ್ರಾಂಶುಪಾಲ ಮಹಮ್ಮದ್ ಹನೀಫ್ , ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸ ಕ ನಿರಂಜನ್, ಮುತ್ತೂರು ಸರಕಾರಿ ಫ್ರೌಡ ಶಾಲೆಯ ಮುಖ್ಯೋಪಾಧ್ಯಾಯ ಸಿಪ್ರಿಂಯಾನ್ ಡಿ.ಸೋಜ, ಮೂಲರಪಟ್ನ ಎಂ.ಜೆ.ಎಮ್ ಇದರ ಅದ್ಯಕ್ಷ ಜಿ.ಕೆ.ಖಾಸಿಂ. ಅರಳ ಗ್ರಾ.ಪಂ.ಸದಸ್ಯ ಯಂ.ಬಿ.ಅಶ್ರಫ್, ಕುಪ್ಪೆಪದವು ಮಾಜಿ ಗ್ರಾ.ಪಂ.ಅದ್ಯಕ್ಷ ಚಂದ್ರಹಾಸ ಶೆಟ್ಟಿ, ಮುತ್ತೂರು ಸತ್ಯ ಸಾರಮಣಿ ಕ್ಷೇತ್ರ ದ ಅರ್ಚಕ ಹರಿಯಪ್ಪ, ಮಾರ್ಗದಂಗಡಿ ಅಲಮುಲ್ ಹುದಾ ಮದ್ರಸ ಅದ್ಯಕ್ಷ ಸತ್ತಾರ್, ಅಝಾದ್ ನಗರದ ಬದ್ರುಲ್ ಹುದಾ ಮದರಸದ ಅಧ್ಯಕ್ಷ ಯಂ.ಪಿ.ಜಬ್ಬಾರ್, ಬಾಳಿಕೆ ಮಸ್ದಿದುಲ್ ಇಮಾಂ ಶಿಬ್ಲಿ ಅಧ್ಯಕ್ಷ ಬಿ.ಎಚ್. ಆಶ್ರಫ್, ಜೆ.ಯಂ.ಕುಪ್ಪೆಪದವು ಅಧ್ಯಕ್ಷ ಉಮರಬ್ಬ ,ಮುತ್ತೂರು ಗ್ರಾ.ಪಂ.ಸದಸ್ಯ ಪ್ರವೀಣ್ ಆಳ್ವ, ಫೌಂಡೇಶನ್ ಟೀಮ್ ಹೆಡ್ ಮೊಹಮ್ಮದ್ ಶಾಲಿ, ಪೈನಾನ್ಸ್ ಹೆಡ್ ಅಬ್ದುಲ್ ರಹಿಮಾನ್ ಎ. ಕಾರ್ಯಕ್ರಮ ಮುಖ್ಯಸ್ಥ ಎಂ.ಬಿ.ಇಸ್ಮಾಯಿಲ್ ಶಾಫಿ ಮತ್ತಿತರರು ಉಪಸ್ಥಿತರಿದ್ದರು.

ಜಿ.ಎಚ್.ಎಮ್ ಫೌಂಡೇಶನ್ ಮುಲಾರಪಟ್ನ (2)
ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಂ.ಎಸ್ ಸ್ವಾಗತಿಸಿದರು.
ಫೌಂಡೇಶನ್ ನ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದ ಮಂಗಳೂರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಸಲಹೆಗಾರ ಹಾಜಿ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *