ಕೈಕಂಬ: ಮೊಗರು ಗುತ್ತು ಫ್ರೆಂಡ್ಸ್ ಇದರ ತೃತೀಯ ವರ್ಷದ `ಮೊಗರು ಗುತ್ತು ಟ್ರೋಫಿ 2018′ ಎನ್ನುವ ಸ್ಥಳಿಯ ಆಹ್ವಾನಿತ ಪುರುಷರ ವಾಲಿಬಾಲ್ ಪಂದ್ಯಾವಳಿ ಇತ್ತೀಚೆಗೆ ಮೊಗರು ಅರ್ಬಿ ಎಂಬಲ್ಲಿ ಜರಗಿತು.ಈ ಕಾರ್ಯಕ್ರಮವನ್ನು ಮೊಗರುಗುತ್ತು ಯಜಮಾನರಾದ ವಸಂತ ಶೆಟ್ಟಿಯವರು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು.

mogaru
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಶಾಸಕ ಡಾ| ವೈ. ಭರತ್ ಶೆಟ್ಟಿಯವರನ್ನು ಸಮ್ಮಾನಿಸಲಾಯಿತು. ಭರತ್ ಶೆಟ್ಟಿ ಮಾತನಾಡಿ, ಸ್ಥಳೀಯವಾಗಿ ಕ್ರೀಡಾಕೂಟವನ್ನು ಆಯೋಜಿಸಿ, ಕ್ರೀಡಾಪಟುಗಳನ್ನು ಗುರುತಿಸುವುದು ನಿಜಕ್ಕೂ ಒಳ್ಳೆಯ ಕೆಲಸ ಎಂದು ನುಡಿದರು. ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಕ್ರೀಡೆಯಲ್ಲಿ ಕಲಾವಿದನ್ನು ಗೌರವಿಸಿದ್ದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ನುಡಿದರು. ಸಮಾರೋಪ ಸಮಾರಂಭವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಡೆಸಿಕೊಟ್ಟರು.
ರಘು ಮುನಲಾಯಿ, ಜನಾರ್ದನ ಗೌಡ, ನಾಗೇಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ನಾರಳ, ರೂಪೇಶ್ ಅದ್ಯಪಾಡಿ, ಉಮೇಶ್ ಭಂಡಾರಿ, ನಯನ್ ಕುಮಾರ್ ಮುನಿಯಾಲ್, ಶಿವಪ್ಪ ಬಂಗೇರಾ, ರಾಜೇಶ್ ಸುವರ್ಣ, ಸೋಹನ್ ಅಥಿಕಾರಿ ಮುಂತಾದವರು ಆಗಮಿಸಿದ್ದರು. ವಿಜೇತರಿಗೆ ಮೊಗರು ಗುತ್ತು ಟ್ರೋಫಿ, ಬೆಸ್ಟ್ ಅಟಾಚರ್, ಪಾಸರ್, ಆಲ್‍ರೌಂಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *