ಮೂಡುಬಿದಿರೆ: ಬೆದ್ರ ಕ್ರಿಕೆಟ್ ಯೂನಿಯನ್‍ನ ನೂತನ ಅಧ್ಯಕ್ಷರಾಗಿ ಪತ್ರಕರ್ತ ಅಶ್ರಫ್ ವಾಲ್ಪಾಡಿ ಅವರು ಆಯ್ಕೆಯಾಗಿದ್ದಾರೆ.

ಮಾರಿಗುಡಿ ತಂಡದ ಚಂದ್ರ (ಉಪಾಧ್ಯಕ್ಷ) , ಟೀಮ್ ಯುನೈಟೆಡ್ ತಂಡದ ಅಖಿಲ್ ಶೆಟ್ಟಿ (ಕಾರ್ಯದರ್ಶಿ)ಹಾಗೂ ಎಂ.ಎಸ್.ಸಿ ತಂಡದ ಅಶ್ರಫ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ನಝ್ಮ ತಂಡದ ದಿನೇಶ್, ತೋಡಾರ್ ತಂಡದ ಹಫೀಝ್, ಕೊಡ್ಯಡ್ಕ ತಂಡದ ಪ್ರಮೋದ್, ಜಿಗರ್ ಮೈಂಡ್ ತಂಡದ ಮಜೀದ್,ಅಲ್ ಫಲಾಹ್ ತಂಡದ ಇಕ್ಬಾಲ್ ಹಾಗೂ ಸೌಹಾರ್ದ ಕಾನ ತಂಡದ ಪ್ರದೀಪ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
