ಮೂಡುಬಿದಿರೆ:ಜೈನ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ವರ್ಷದ ಎನ್‍ಎಸ್‍ಎಸ್ ಶಿಬಿರವು ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿ ಇಲ್ಲಿ ಭಾನುವಾರ ಉದ್ಘಾಟನೆಗೊಂಡಿತು.
ಒಂದು ವಾರ ನಡೆಯುವ ಶಿಬಿರವನ್ನು ನಡ್ಯೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಲಹಾ ಸಮಿತಿ ಅಧ್ಯಕ್ಷರಾದ ಎಂ. ಪುರುಷೋತ್ತಮ ಶೆಟ್ಟಿ ಉದ್ಘಾಟಿಸಿ ಶಿಬಿರಕ್ಕೆ ಶುಭ ಹಾರೈಸಿದರು.

NSS CAMP AT NADYODI (2)
ಮುಖ್ಯ ಅತಿಥಿಯಾದ ಪುರಸಭಾ ಸದಸ್ಯೆ ಸುಪ್ರಿಯಾ ಡಿ. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಮನೋಭಾವ ಒಳ್ಳೆಯ ವ್ಯಕ್ತಿತ್ವ ನಿರ್ಮಾಣಕ್ಕೆ ಸಾಧ್ಯವಾಗಬಲ್ಲದು. ವಿದ್ಯಾರ್ಥಿ ದಿಸೆಯಿಂದಲೆ ಇಂತಹ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ಪುರಸಭಾ ಸದಸ್ಯ ರಾಜೇಶ್ ಕೋಟೆಗಾರ್ ಮಾತನಾಡಿ, ಮಕ್ಕಳು ಕಲಿಕೆಯ ಜತೆಗೆ ಪಠ್ಯೇತರ ವಿಷಯಗಳ ಬಗ್ಗೆಯು ಆದ್ಯತೆ ನೀಡಬೇಕು. ತಪ್ಪು ವಿಚಾರಗಳ ಬಗ್ಗೆ ಗಮನ ಕೊಡಬೇಡಿ ಎಂದು ಸಲಹೆ ನೀಡಿದರು.

NSS CAMP AT NADYODI (1)
ಜೈನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಧುಕರ ಸಾಲಿನ್ಸ್ ಮಾತನಾಡಿ, ವಿದ್ಯಾರ್ಥಿಗಳು ಎನ್‍ಎಸ್‍ಎಸ್ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು. ಬದುಕಿನಲ್ಲಿ ನಾಯಕತ್ವದ ಗುಣ, ವ್ಯಕ್ತಿತ್ವ ವಿಕಸನ, ಸಂಘಟನೆ ಹೀಗೆ ಬದುಕು ರೂಪಿಸಲು ಬೇಕಾಗುವ ಅನೇಕ ವಿಚಾರಗಳನ್ನು ಇಂತಹ ಶಿಬಿರಗಳಲ್ಲಿ ಕಲಿಯಲು ಅವಕಾಶ ಸಿಗುತ್ತದೆ ಎಂದರು.
ಕಾರ್ಯಕ್ರಮವನ್ನು ಶಿಬಿರಾಧಿಕಾರಿ ನವೀನ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಜಿತೇಶ್ ಸ್ವಾಗತಿಸಿದರು. ವಿಖ್ಯಾತ್ ನಿರೂಪಿಸಿದರು. ಆಲ್ಫೋನ್ ವಂದಿಸಿದರು.

By Suddi9

Leave a Reply

Your email address will not be published. Required fields are marked *