ಮೂಡುಬಿದಿರೆ: ಕನ್ನಡ ಶಾಲೆಗಳನ್ನು ಉಳಿಸುವ ಕರ್ತವ್ಯ ಸರಕಾರದ್ದಾಗಿದೆ. ಕನ್ನಡವನ್ನು ಉಳಿಸಬೇಕೆಂದು ಕರೆ ನೀಡುವ ಸರಕಾರವು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ಅನುದಾನವನ್ನು ಕಡಿತ ಮಾಡುತ್ತಿರುವುದು ಶೋಚನೀಯ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜ| ಎಸ್. ಅಬ್ದುಲ್ ನಝೀರ್ ಹೇಳಿದರು.

ಸೋಮವಾರ ಹುಟ್ಟೂರಿನಲ್ಲಿ ತಾವು ಕಲಿತ ಕಡಲಕೆರೆ ಸಂತ ಇಗ್ನೇಶಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಶಿಶುಮಂದಿರದಲ್ಲಿ ಆಯೋಜಿಸಿದ ಶ್ರೀ ಸರಸ್ವತಿ ಪೂಜೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪತ್ನಿ ಶಮೀರಾ ಜತೆಗೆ ತಮಗೆ ನೀಡಲಾದ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಡಲಕೆರೆ ಶಾಲೆಯಲ್ಲಿ ತಾವು ಓದಿದ ದಿನಗಳನ್ನು , ಗುರುಗಳು, ಓರಗೆಯವರನ್ನು ಅವರು ಸ್ಮರಿಸಿಕೊಂಡರು.

Suprim Court justice abdul nazeer sammana

ಸೇವಾಂಜಲಿ ಟ್ರಸ್ಟ್‍ನ ಕಾರ್ಯದರ್ಶಿ ಎಂ. ಶಾಂತರಾಮ ಕುಡ್ವ ಅವರು ಅಬ್ದುಲ್ ನಝೀರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಕಡಲಕೆರೆ ಶಾಲೆಯ ಅಭಿವೃದ್ದಿಗಾಗಿ ಅದಾನಿ ಕಂಪೆನಿಯಿಂದ ರೂ. 25 ಲಕ್ಷ ದೇಣಿಗೆಯಾಗಿ ಒದಗಿಸುವುದಾಗಿ ಉಡುಪಿ ಅದಾನಿ ಯುಪಿಸಿಎಲ್ ಸಂಸ್ಥೆಯ ಸಹ ಅಧ್ಯಕ್ಷ ಕಿಶೋರ್ ಆಳ್ವ ಘೋಷಿಸಿದರು. ಶಾಲೆಯ ಅಭಿವೃದ್ಧಿಯ ಹಿತದೃಷ್ಠಿಯಿಂದ, ಶ್ರೇಷ್ಠಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಣ ಪೂರಕ ಪರಿಕರಗಳನ್ನು ಪೂರೈಸಲು ಬದ್ಧರಾಗಿದ್ದೇವೆ ಎಂದು ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ವಿಭಾಗದ ಚೀಫ್ ಮ್ಯಾನೇಜರ್ ಬಿ.ಹರೀಶ್ ಬಾಳಿಗ ಭರವಸೆ ನೀಡಿದರು.

ಮುಖ್ಯಅತಿಥಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಂಪರ್ಕ ಪ್ರಮುಖ್ ರವೀಂದ್ರ ಪುತ್ತೂರು ಅವರು ಮಾತನಾಡಿ, `ಭಾರತದಲ್ಲಿದ್ದ ಎರಡೂವರೆ ಲಕ್ಷ ಗುರುಕುಲಗಳನ್ನು ನಾಶ ಮಾಡಿ ಆಧುನಿಕ ಶಿಕ್ಷಣದ ಮೂಲಕ ಈ ದೇಶದ ಸಂಸ್ಕøತಿಯನ್ನು ನಾಶ ಮಾಡುವ ಹುನ್ನಾರ ಮೆಕಾಲೆ ಎಂಬ ವಿದೇಶೀ ಶಿಕ್ಷಣ ತಜ್ಞನ ಮೂಲಕ ನಡೆದಿರುವುದು ದುರಂತ. ಈಗ ಕನಿಷ್ಟ ನಮ್ಮ ಮಾತೃಭಾಷಾ ಶಾಲೆಗಳನ್ನಾದರೂ ಉಳಿಸಿಕೊಳ್ಳುವ ಮೂಲಕ ನಾಡಿನ ಸಂಸ್ಕøತಿಯನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ’ ಎಂದರು.

ಸೇವಾಂಜಲಿ ಎಜ್ಯುಕೇಷನ್ ಟ್ರಸ್ಟ್ ಸಂಚಾಲಕ ಪ್ರೋ. ಯಂ.ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅತಿಥಿಗಳಾಗಿ ಪಾಲ್ಗೊಂಡು ತಮ್ಮ ವಿದ್ಯಾರ್ಥಿಯಾಗಿದ್ದ ಜ| ಅಬ್ದುಲ್ ನಝೀರ್ ಸಾಧನೆಯ ಬಗ್ಗೆ ಅಭಿಮಾನಪೂರ್ವಕ ಶ್ಲಾಘಿಸಿದರು.

ಸೇವಾಂಜಲಿ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕೇಶವ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ನೂತನ ಕಟ್ಟಡ ಅತೀ ಶೀಘ್ರದಲ್ಲಿ ಮೇಲೇಳುವಂತೆ ಶಿಕ್ಷಣಾಭಿಮಾನಿಗಳು ಉದಾರ ಕೊಡುಗೆ ನೀಡಿ ಸಹಕರಿಸಬೇಕು ಎಂಬ ವಿನಂತಿಯೊಂದಿಗೆ ಶಾಲಾ ಮುಖ್ಯೋಪಾಧ್ಯಾಯ ಬಿ.ಜಯರಾಮ್ ರಾವ್ ವಂದಿಸಿದರು.
ಪ್ರೇರಣಾ ಶಿಶುಮಂದಿರ ಹಾಗೂ ಕಡಲಕೆರೆ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಕಿನ್ನಿಗೋಳಿ `ಭರತಾಂಜಲಿ’ ಯ ವಿದುಷಿ ಅನ್ನಪೂರ್ಣಾ ಶೆಟ್ಟಿ ಅವರ ಶಿಷ್ಯೆಯರಿಂದ ನೃತ್ಯ ಸಿಂಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

By Suddi9

Leave a Reply

Your email address will not be published. Required fields are marked *