ಬಂಟ್ವಾಳ: ಬಂಟ್ವಾಳ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ( ರಿ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ 2017-18 ಸಾಲಿನ ವಾರ್ಷಿಕ ಮಹಾಸಭೆಯು ಬಿಸಿರೋಡ್‍ನ ರೋಟರಿ ಬಾಲ ಭವನದಲ್ಲಿ ನಡೆಯಿತು.
ಬಳಿಕ ವಿಟ್ಲ ಸಿಡಿಪಿಒ ಸುಧಾ ಜೋಶಿ ಮಾತನಾಡಿ, ಮುಂದಿನ ದಿನಗಳಲ್ಲಿ ನೂತನ ವರ್ಷದ ಒಕ್ಕೂಟದ ಪದಾಧಿಕಾರಿಗಳು ಬದಲಾವಣೆಯ ಹೆಜ್ಜೆಗಳನ್ನು ಹಾಕಬೇಕು. ಇಲಾಖೆಯ ಸೂಕ್ತವಾದ ಮಾಹಿತಿಯನ್ನು ಈ ಒಕ್ಕೂಟದ ಮೂಲಕ ತಿಳಿಸುವ ಮಹತ್ತರ ಜವಾಬ್ದಾರಿ ಗಳನ್ನು ಮಾಡಬೇಕು ಎಂದರು.

ಒಕ್ಕೂಟದ ಬೆಳವಣಿಗೆಗೆ ಸದಸ್ಯರ ಒಮ್ಮತದ ಅಭಿಪ್ರಾಯ ಹಾಗೂ ಮನಸ್ಸು ಗಳು ಬೇಕಾಗಿದೆ ಎಂದು ಹೇಳಿದರು.
ಬಂಟ್ವಾಳ ಸಿ.ಡಿ.ಪಿ.ಒ.ಮಲ್ಲಕಾ ಮಾತನಾಡಿ, ಮಹಿಳೆಯರು ಆರ್ಥಿಕ ವಾಗಿ ಸಬಲರಾಗಲು ಒಕ್ಕೂಟದ ಪಾತ್ರ ಬಹಳಷ್ಟು ಇದೆ. ಈ ಒಕ್ಕೂಟ ಇನ್ನಷ್ಟು ಪ್ರಗತಿ ಹೊಂದಲಿ ಎಂದು ಶುಭಹಾರೈಸಿದರು .

ಇದೇ ಸಂದರ್ಭದಲ್ಲಿ ಒಕ್ಕೂಟದ ಸದಸ್ಯ ರ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಪ್ರತಿಭಾ ಪುರಸ್ಕಾರ ಪ್ರೋತ್ಸಾಹ ಧನ ನೀಡಲಾಯಿತು.
ಬಳಿಕ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಪುಷ್ಪ ಲತಾ ಎಂ.ಶೆಟ್ಟಿ ಪೆರುವಾಯಿ, ಶಕುಂತಲಾ , ರಂಜನಿ, ಬೆನ್ಡಿಡಿಕ್ಟಾ, ಉಷಾ ಉಕ್ಕಡ, ಲತಾ, ಉಷಾ ನರಿಕೊಂಬು, ಜೆಸಿಂತಾ ಕುವೆಲ್ಲೊ, ಸುಜಾತ ಕುರ್ನಾಡು , ಪದ್ಮಾವತಿ ಇಡ್ಕಿದು ಮತ್ತಿತರರು ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ಗಾಯಂತ್ರಿ ಕಂಬಳಿ ಸ್ವಾಗತಿಸಿ, ರಂಜನಿ ವಂದಿಸಿದರು. ಶಕುಂತಲಾ ಕಾರ್ಯಕ್ರಮ ನಿರೂಪಿಸಿದರು
