ಎಡಪದವು: ವಿಜಯ ಬ್ಯಾಂಕ್ ಗ್ರಾಹಕರ ಜೊತೆ ನಿರ್ಲಕ್ಷ್ಯದಿಂದ ವರ್ತಿಸುತ್ತದೆ ಎಂದು ಆರೋಪಿಸಿ ವಿಜಯ ಬ್ಯಾಂಕ್ ಕುಪ್ಪೆಪದವು ಶಾಖೆ ವಿರುದ್ಧ ಕುಪ್ಪೆಪದವು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

0510malali1

ಪಂಚಾಯತ್ ನೇತೃತ್ವದಲ್ಲಿ ಆಗಮಿಸಿದ ಗ್ರಾಹಕರು, ವಿಜಯ ಬ್ಯಾಂಕ್ ಗೆ ಮುತ್ತಿಗೆ ಹಾಕಿ, ಪಂಚಾಯತ್‍ಗೆ ಧಿಕ್ಕಾರ ಕೂಗಿದರು. ವಿಜಯ ಬ್ಯಾಂಕ್ ಕುಪ್ಪೆಪದವು ಶಾಖೆಯಲ್ಲಿ ಹಲವಾರು ದಿನಗಳಿಂದ ಸಿಬ್ಬಂದಿ ಕೊರತೆ ಇರುವುದರಿಂದ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಹಕರ ವಿರುದ್ಧ ನಿರ್ಲಕ್ಷ್ಯ ತೋರುವ ಬ್ಯಾಂಕ್ ಸಿಬ್ಬಂದಿ, ಗ್ರಾಹಕರ ಜೊತೆ ಸರಿಯಾಗಿ ಸ್ಪಂದಿಸುವುದಿಲ್ಲ. ಬ್ಯಾಂಕ್ ಸಿಬ್ಬಂದಿಗೆ ಸ್ಥಳೀಯ ಭಾಷೆ ಬಾರದೇ ಇರುವುದರಿಂದ ಜನಸಾಮಾನ್ಯರ ಜೊತೆ ವ್ಯವಹಾರ ನಡೆಸಲು ಕಷ್ಟವಾಗುತ್ತಿದೆ.

0510malali2 ಸಿಬ್ಬಂದಿ ಹಿಂದಿಯಲ್ಲಿ ವ್ಯವಹರಿಸುವುದರಿಂದ ಹಿಂದಿ ಬಾರದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿ ಗ್ರಾಹಕರ ಜೊತೆ ಉಡಾಫೆಯಾಗಿ, ಒರಟುತನದಿಂದ ವರ್ತಿಸಿ, ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬ್ಯಾಂಕ್‍ನಲ್ಲಿ ಪ್ರತೀದಿನ ಸರ್ವರ್ ಸಮಸ್ಯೆ ಇದ್ದು, ಯಾವೊಂದು ಕೆಲಸವೂ ನಡೆಯುವುದಿಲ್ಲ. ಅಲ್ಲದೆ ಇಲ್ಲಿನ ವಿಜಯ ಬ್ಯಾಂಕ್ ಎಟಿಎಂ ಮಿಶೀನಿನಲ್ಲಿ ಹಣವೇ ಇರುವುದಿಲ್ಲ. ಹೆಚ್ಚಿನ ಜನರು ವಿಜಯ ಬ್ಯಾಂಕ್ ಗ್ರಾಹಕರಾಗಿರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ, ಆದ್ದರಿಂದ ಈ ಸಮಸ್ಯೆಯನ್ನು ನಿವಾರಿಸಿ ಗ್ರಾಹಕ ಸ್ನೇಹಿ ಬ್ಯಾಂಕ್ ಆಗಬೇಕು, ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಲಾಗುತ್ತದೆ ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ.

0510malali3
ಈ ವೇಳೆ ವಿಜಯ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ಚೀಪ್ ಮೆನೇಜರ್ ರಾಜರಾಜೇಶ್ ಡಿ. ಕುಲಕರ್ಣಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ, ಹತ್ತು ದಿನಗಳಲ್ಲಿ ಬ್ಯಾಂಕ್‍ನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಾಗುವುದು. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮೆನೇಜರ್ ಅವರ ಭರವಸೆಯ ಮಾತುಗಳನ್ನು ಕೇಳಿ ಜನರು ಪ್ರತಿಭಟನೆಯನ್ನು ನಿಲ್ಲಿಸಿದರು.
ಬಜಪೆ ಪೊಲೀಸರು ಆಗಮಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಒಳಪ್ರವೇಶಿಸದಂತೆ ತಡೆದರು.

0510malali4ಬಜಪೆ ಇನ್ಸ್‍ಪೆಕ್ಟರ್ ಪರಶಿವ ಮೂರ್ತಿ, ಎಸ್‍ಐ ಶಂಕರ್ ನಾೈರಿ ಅಗಮಿಸಿದ್ದರು.
ಪ್ರತಿಭಟನಕಾರರ ಪರವಾಗಿ ಕುಪ್ಪೆಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ ಮಾತಾಡಿದರು. ಅಧ್ಯಕ್ಷೆ ಲೀಲಾವತಿ, ಹಿರಿಯರಾದ ಹಿರಣ್ಯಾಕ್ಷ, ರಫೀಕ್ ಅಚಾರಿಜೋರ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *