ಬಂಟ್ವಾಳ : ವೆಲ್ಡಿಂಗ್ ಕೆಲಸ ಮಾಡುವ ವೇಳೆ ತಾಂತ್ರಿಕ ಸಮಸ್ಯೆಉಂಟಾಗಿ ಗಂಭೀರ ಗಾಯಗೊಂಡ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ಮದ್ಯರಾತ್ರಿ ಖಾಸಗಿ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ಸುರೇಶ್ ಕುಲಾಲ್( 45) ಕಾಮಾಜೆ ನಿವಾಸಿಯಾಗಿದ್ದಾರೆ. ಸುರೇಶ್ ಕುಲಾಲ್ ಅವರು ಮಂಗಳೂರು ಖಾಸಗಿ ವೆಲ್ಡಿಂಗ್ ಶಾಪ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಕಳೆದ ಶುಕ್ರವಾರ ವೂ ಎಂದಿನಂತೆ ಲೀಕೇಜ್ ಸಮಸ್ಯೆ ಗೆ ಸಂಬಂಧಿಸಿದಂತೆ ಪೆಟ್ರೋಲ್ ಟ್ಯಾಂಕರ್ ಒಂದರ ಮೇಲೆ ಕುಳಿತು ವೆಲ್ಡಂಗ್ ಕೆಲಸ ಮಾಡುತ್ತಿದ್ದರು. ಆದರೆ ಯಾವುದೋ ತಾಂತ್ರಿಕ ಕಾರಣಗಳಿಂದ ಪೆಟ್ರೋಲ್ ಟ್ಯಾಂಕರ್ ಸ್ಫೋಟ ಗೊಂಡು ಸುರೇಶ್ ಕುಲಾಲ್ ಜೊತೆ ನಾಲ್ವರು ಗಾಯಗೊಂಡಿದ್ದರು.
ಗಂಭೀರ ಗಾಯಗೊಂಡ ಸುರೇಶ್ ಕುಲಾಲ್ ಅವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ಮಧ್ಯರಾತ್ರಿ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮ್ರತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
