ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಪುತ್ತಿಗೆಪದವಿನಲ್ಲಿ ಆಟೋ ಹಾಗೂ ಬೈಕ್ ಡಿಕ್ಕಿಯಾಗಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಾಯಗೊಮಡ ವ್ಯಕ್ತಿ ಅಶ್ವತ್ಥಪುರ ವಂಟಿಮಾರು ನಿವಾಸಿ ಚಂದ್ರಶೇಖರ್ ಶಟ್ಟಿಎಂದು ತಿಳಿದುಬಂದಿದೆ.

ಮೂಡುಬಿದಿರೆ ವಿದ್ಯಾಗಿರಿ ಕಡೆಯಿಂದ ಅಶ್ವತ್ಥಪುರ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ನೀರ್ಕೆರೆಯಿಂದ ಮೂಡುಬಿದಿರೆ ಕಡೆಗೆ ಓವರ್ಟೇಕ್ ಮಾಡಿಕೊಂಡು ಬರುತ್ತಿದ್ದ ಆಟೋ ಡಿಕ್ಕಿಯಾಗಿದ್ದು, ಬೈಕ್ ಸವಾರ ಮಾತ್ರವಲ್ಲದೆ ಆಟೋ ಚಾಲಕ ಹಾಗೂ ಆಟೋದಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
