ಸುದ್ದಿ9ಬಂಟ್ವಾಳ:ಸಮಾಜದಲ್ಲಿ ಹಿಂದಿನ ಮತ್ತು ಇಂದಿನ ಶಿಕ್ಷಕರ ಗುಣಮಟ್ಟದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಸನ್ಯಾಸಿಗಳಂತೆ ಇವರ ವೃತ್ತಿ ಬದುಕು ಎಂದಿಗೂ ಶ್ರೇಷ್ಟ ಮತ್ತು ಗೌರವಯುತವಾಗಿರುತ್ತದೆ. ಇದರಿಂದಾಗಿ ಶಿಕ್ಷಕರು ಚಿಕ್ಕ ತಪ್ಪು ಮಾಡಿದರೂ ಗರಿಷ್ಟ ಪ್ರಮಾಣದಲ್ಲಿ ಸುದ್ದಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ‘ಗುರುವಂದನೆ’ ಕಾರ್ಯಕ್ರಮದಲ್ಲಿ ವಿವಿಧ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ವಿದ್ಯಾಥರ್ಿ ಸಮೂಹಕ್ಕೆ ಬಾಲ್ಯದಿಂದಲೇ ಧಾರ್ಮೀಕ ಸಹಿಷ್ಣುತೆ ಜೊತೆಗೆ ಪರಸ್ಪರ ಸೌಹಾರ್ದತೆಗೆ ಹೆಚ್ಚಿನ ಒತ್ತು ನೀಡಿದಾಗ ಅವರಲ್ಲಿ ಸಾಧನಾ ಮನೋಭಾವದೊಂದಿಗೆ ಸಮಾನತೆ ಬೆಳೆದು ಸುಸಂಸ್ಕೃತ ಮತ್ತು ಶೋಷಣೆಮುಕ್ತ ಸಮೃದ್ಧ ಭಾರತ ನಿಮರ್ಾಣವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ‘ಊರಿಗೆ ಅರಸನಾದರೂ ತಾಯಿಗೆ ಮಗ’ ಎಂಬಂತೆ ಶಿಕ್ಷಕರನ್ನು ಪ್ರತಿಯೊಬ್ಬರೂ ಎಂದೆಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದರು.
ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವರದರಾಜ ಚಂದ್ರಗಿರಿ ಇವರು ವಿಶೇಷ ಉಪನ್ಯಾಸ ನೀಡಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಅನನ್ಯ ಎಂದರು.
ಜಿ.ಪಂ.ಸದಸ್ಯರಾದ ಮಮತಾ ಎಸ್.ಗಟ್ಟಿ, ನಳಿನಿ ಬಿ.ಶೆಟ್ಟಿ, ಚಂದ್ರಪ್ರಕಾಶ ಶೆಟ್ಟಿ, ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ, ಸದಸ್ಯರಾದ ಆನಂದ ಶಂಭೂರು, ದಿನೇಶ ಅಮ್ಟೂರು, ಎಪ್ರಿಯಂ ಸಿಕ್ಷೇರ, ಕಮಲಾಕ್ಷಿ ಪೂಜಾರಿ ಮತ್ತಿತರರು ಶುಭ ಹಾರೈಸಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಶಿಕ್ಷಣ ಸಂಯೋಜಕ ರಮಾನಂದ, ಸುಜಾತ, ಫ್ರಾನ್ಸಿಸ್ ಡೇಸಾ, ಮತ್ತಿತರರು ಇದ್ದರು.
ಕ್ಷೇತ್ರಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಸ್ವಾಗತಿಸಿ, ಸಮನ್ವಯಾಧಿಕಾರಿ ರಾಜೇಶ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
—

