ಮೂಡುಬಿದಿರೆ: ಹಳೆ ವಿಷಯಕ್ಕೆ ಸಂಬಂಧಿಸಿದಂತೆ ಸ್ನೇಹಿತರಿಬ್ಬರ ಮಧ್ಯೆ ನಡೆದ ಮಾತಿನ ಚಕಮಕ್ಕಿಯಲ್ಲಿ ವ್ಯಕ್ತಿಯೋರ್ವ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಶಿರ್ತಾಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಶಿರ್ತಾಡಿ ಚರ್ಚ್ ಶಾಲೆ ಬಳಿಯ ನಿವಾಸಿ ಶೇಖರ್ ಪೂಜಾರಿ(52) ಮೃತಪಟ್ಟ ವ್ಯಕ್ತಿ. ಇವರು ಮೂಲತ: ಕೇರಳದವರಾಗಿದ್ದು ಮದುವೆ ಬಳಿಕ ಹಲವು ವರ್ಷಗಳಿಂದ ಶಿರ್ತಾಡಿಯಲ್ಲಿ ನೆಲೆಸಿದ್ದಾರೆ. ಕೊಲೆ ನಡೆಸಿದ ಆರೋಪಿ ಈತನ ಸ್ನೇಹಿತ ಶಿರ್ತಾಡಿಯ ಜಯ ಮಡಿವಾಳ(42)ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ. ಹಲವು ವರ್ಷಗಳಿಂದ ಇವರಿಬ್ಬರು ಸ್ನೇಹಿತರಾಗಿದ್ದಾರೆ. ಮಂಗಳವಾರ ರಾತ್ರಿ ಶೇಖರ್ ಪೂಜಾರಿ ಸ್ನೇಹಿತ ಜಯ ಮಡಿವಾಳ ಮನೆಗೆ ಬಂದಿದ್ದರು. ಅಲ್ಲಿ ಇಬ್ಬರು ಮದ್ಯ ಸೇವಿಸಿ ಊಟಕ್ಕೆ ತಯಾರಾಗಿದ್ದರು ಎನ್ನಲಾಗಿದೆ. ಅಷ್ಟೊತ್ತಿಗೆ ಇಬ್ಬರ ಮಧ್ಯೆ ಹಳೆ ವಿಷಯಕ್ಕೆ ಸಂಬಂಧಿಸಿ ಮಾತಿನ ವಾಗ್ಯುದ್ದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸಿಟ್ಟಿಗೆದ್ದ ಜಯ ಮಡಿವಾಳ ಮನೆಯಲ್ಲಿದ್ದ ಕತ್ತಿಯಿಂದ ಶೇಖರಪೂಜಾರಿಯ ಕುತ್ತಿಗೆ ಮತ್ತು ತಲೆಗೆ ಕಡಿದಿದ್ದಾನೆ ಎನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಶೇಖರ ಪೂಜಾರಿ ಸ್ಥಳದಲ್ಲೆ ಸಾವನಪ್ಪಿದ್ದಾರೆ.
ಬುಧವಾರ ಬೆಳಗ್ಗೆ ನೆರೆಮನೆಯವರೊಬ್ಬರಿಗೆ ವಿಷಯ ತಿಳಿದು ಬೆಳಕಿಗೆ ಬಂದಿದೆ. ಮೂಡುಬಿದಿರೆ ಪೆÇಲೀಸರು ಸ್ಥಳಕ್ಕಾಗಮಿಸಿದಾಗ ಆರೋಪಿ ಘಟನೆ ನಡೆದ ಮನೆಯಲ್ಲೆ ಮಲಗಿದ್ದ ಎನ್ನಲಾಗಿದೆ. ಪೆÇಲೀಸರ ವಿಚಾರಣೆ ವೇಳೆ `ನನ್ನ ಮೈಮೇಲೆ ಬ್ರಹ್ಮರಾಕ್ಷಸ ಬಂದಿದ್ದಾನೆ’ ಎಂದಿದ್ದಾನೆ. ಮೂಡುಬಿದಿರೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
