ಬಂಟ್ವಾಳ: ಲಯನ್ಸ್ ಕ್ಲಬ್ ಅಶೋಕನಗರ ಮಂಗಳೂರು ಆಶ್ರಯದಲ್ಲಿ ರೋಟರಿ ಕ್ಲಬ್ ಮಂಗಳೂರು ಹಿಲ್‍ಸೈಡ್, ರೋಟರಿ ಕ್ಲಬ್ ಮೂಡಬಿದಿರೆ, ದ.ಕ. ಅಟೋಮೋಬೈಲ್ಸ್ ಮತ್ತು ಟಯರ್ ಡೀಲರ್ ಅಸೋಸಿಯೇಷನ್ ಸಹಯೋಗದೊಂದಿಗೆ ಭಾನುವಾರ ಬಿ.ಸಿ.ರೋಡಿನ ಕಾಮಾಜೆಯ ಹರ್ಷ ಫಾರ್ಮ್ ಹೌಸ್‍ನಲ್ಲಿ ನಡೆಯಿತು.

BTW_OCT3_8
ಕಾರ್ಯಕ್ರಮವನ್ನು ಅದಾನಿ ಯುಪಿಸಿಎಲ್‍ನ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ ಉದ್ಘಾಟಿಸಿ ಅವರು ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಉದ್ಯಮಿಗಳು ಹಾಗೂ ಸಿರಿವಂತರು ಇದ್ದರೂ ಉದ್ಯಮಗಳ ಬೆಳವಣಿಗೆಯ ಬಗ್ಗೆ ಸಾಕಷ್ಟು ಗಮನ ಹರಿಸಿಲ್ಲ. ದ.ಕ. ಬಂದಿರುವ ಕಂಪೆನಿಗಳ ಪೈಕಿ ಹೆಚ್ಚಿನ ಕಂಪೆನಿಗಳು ಹೊರರಾಜ್ಯದ್ದೇ ಆಗಿದೆ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಇಂತಹ ಕಂಪೆನಿಗಳು ಸಹಕಾರಿಯಾಗುತ್ತಿದ್ದು ಪರಿಸರ ಹಾನಿಯಿಲ್ಲದ ಉದ್ಯಮಗಳ ಸೃಷ್ಟಿಗೆ ಉಳ್ಳವರು ಗಮನಹರಿಸಬೇಕೆಂದರು.
ಲಯನ್ಸ್ ಕ್ಲಬ್ ಅಶೋಕ್‍ನಗರದ ಅಧ್ಯಕ್ಷ ಮಿತ್ರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ರಾಧಕೃಷ್ಣ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಇದೇ ವೇಳೆ ಶಾಲಾ ಶಿಕ್ಷಕರಾದ ವೇದಾಶ್ರೀ ನಿಡ್ಯೆ, ಸುಜಿತ್‍ಕುಮಾರ್, ಪುಟ್ಟೇಗೌಡ ಎಚ್.ಸಿ. ಭವಾನಿ ಶಂಕರ್, ಪ್ರಭಾಕರ ಬಂಡಿ, ಸ್ವಾತೀ ಪ್ರಮೋದ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ, ಮುಡಿಪು ಕುರ್ನಾಡು, ಅಶೋಕ್‍ನಗರ, ವಿಟ್ಲ, ಬಂಟ್ವಾಳ, ಲೋರೆಟ್ಟೋ ಪದವು, ಅಧ್ಯಕ್ಷರುಗಳು, ರೋಟರಿ ಕ್ಲಬ್ ಹಿಲ್‍ಸೈಡ್, ರೋಟರಿ ಕ್ಲಬ್ ಮೂಡಬಿದಿರೆ ಹಾಗೂ ದ.ಕ. ಅಟೋಮೊಬೈಲ್ ಮತ್ತು ಟಯರ್ ಡೀಲರ್ ಎಸೋಸಿಯೇಷನ್‍ನ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹರ್ಷ ಕುಮಾರ್ ಕೇದಗೆ ಪ್ರಾಯೋಜಿಸಿದರು. ವಸಂತ ಶೆಟ್ಟಿ ವಂದಿಸಿದರು. ಕುಸುಮ, ಡಾ. ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *