ಕೈಕಂಬ:ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರು ಸಂಘಟಿತರಾಗಿ ಹಿಂದೂ ಸಂಸ್ಕøತಿಯನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಹಿಂದೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಗುರುಪುರ ಪ್ರಖಂಡ ಸಂಚಾಲಕ ಹರೀಶ್ ಮಟ್ಟಿ ಹೇಳಿದರು.
ಅವರು ಭಾನುವಾರ ಗುರುಪುರ ಕೈಕಂಬ ಸಮೀಪದ ಮಳಲಿ ಮಟ್ಟಿಯ ಕಾಲಭೈರವೇಶ್ವರ ದೇವಸ್ಥಾನ ಬಳಿ ನಡೆದ ಹಿಂದೂ ಜಾಗರಣ ವೇದಿಕೆ ಮಹಿಳಾ ಘಟಕದ ಉದ್ಘಾಟನಾ ಸಮಾರಂಭಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.

1vp udghatane
ಇಂದು ಹಿಂದೂಗಳಿಗೆ ಅನೇಕ ಸವಾಲುಗಳಿವೆ. ಈ ಸವಾಲುಗಳನ್ನು ಮೆಟ್ಟಿ ನಿಲ್ಲಲು ಪ್ರತಿಯೊಬ್ಬ ಹಿಂದೂಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಮಹಿಳೆಯರು ಜಾಗೃತರಾಗಿ ತಮ್ಮನ್ನು ತಾವು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಹಿಂದೂ ಸಂಸ್ಕøತಿ, ಪರಂಪರೆಯನ್ನು ಉಳಿಸಲು ಮುಂದಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಮಟ್ಟಿಯ ಹಿಂದೂ ಜಾಗರಣ ವೇದಿಕೆಯ ಮಹಿಳಾ ಘಟಕದ ಕಾರ್ಯಕರ್ತೆಯರು ಹಿಂದೂ ಸಂಸ್ಕøತಿಯನ್ನು ಉಳಿಸಲು ಸಂಘಟನೆಯಲ್ಲಿ ತೊಡಗಿರುವುದು ಧರ್ಮರಕ್ಷಣೆಯಲ್ಲಿ ತೊಡಗುವಂತಾಗಲಿ ಎಂದು ಹರೀಶ್ ಮಟ್ಟಿ ಈ ಸಂದರ್ಭದಲ್ಲಿ ನುಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ಅರ್ಚಕ ಎಲ್ಲರಿಗೂ ಶುಭ ಹಾರೈಸಿದರು. ಹಲವು ಮಂದಿ ಮಹಿಳೆಯರು ಉಪಸ್ಥಿತರಿದ್ದರು.

001

By suddi9

Leave a Reply

Your email address will not be published. Required fields are marked *