ಬಂಟ್ವಾಳ: ಸಪ್ಟೆಂಬರ್ 2016ರ ಸರ್ಜಿಕಲ್ ಸ್ಟ್ರೆಕ್ ಕಾರ್ಯಾಚರಣೆಯ 2ನೇ ವರ್ಷದ ಶೌರ್ಯ ದಿವಸ ಕಾರ್ಯಕ್ರಮವು ಬಂಟ್ವಾಳ ಕ್ಷೇತ್ರÀ ಬಿ.ಜೆ.ಪಿ ವತಿಯಿಂದ ಪಕ್ಷದ ಕಛೇರಿಯಲ್ಲಿ ನಡೆಯಿತು. ಜಿಲ್ಲಾ ಬಿ.ಜೆ.ಪಿ ಪ್ರಧಾನಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

btl bjp (2)
ಇದೇ ವೇಳೆ ಇತೀಚಿಗೆ ಹುತಾತ್ಮರಾದ ಯೋಧ ಲಾನ್ಸ್ ನಾಯ್ಕ್ ಸಂದೀಪ್ ಸಿಂಗ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕ್ಷೇತ್ರದ ವಿವಿಧ ಗ್ರಾಮಗಳ 20 ನಿವೃತ್ತ ಯೋಧರನ್ನು ಗೌರವಿಸಲಾಯಿತು.

btl bjp (1)

ಮಂಚಿ ಗ್ರಾಮದ ನೂಜಿಪಾಡಿ ನಿವಾಸಿ ಶ್ರೀಮತಿ ಲಲಿತಾ ರಾವ್ ರವರ ಇಬ್ಬರು ಮಕ್ಕಳಾದ ಅನಂತ ರಾವ್, ರಮೇಶ್ ರಾವ್ ರವರು ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಇವರ ಜೊತೆಯಲ್ಲಿ ಲಲಿತಾ ರಾವ್ ಅವರಿಗೂ ಗೌರವ ಸಲ್ಲಿಸಲಾಯಿತ್ತು.

btl bjp (4)
ಈ ಸಂದರ್ಭದಲ್ಲಿ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷರಾದ ಬಿ.ದೇವದಾಸ್ ಶೆಟ್ಟಿ, ಪ್ರಧಾನಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ ,ಮೋನಪ್ಪ ದೇವಸ್ಯ, ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ, ವಿಜಯ ರೈ, ರಮನಾಥ್ ರಾಯಿ, ಸೀತರಾಮ ಪೂಜಾರಿ, ರಂಜಿತ್ ಮೈರ , ಪುರುಷೋತ್ತಮ ಶೆಟ್ಟಿ, ಹರೀಶ್ ಆಚಾರ್ಯ, ದಿನೇಶ್ ಭಂಡಾರಿ, ಗುರುದತ್ ನಾಯಕ್, ಪುರುಷೋತ್ತಮ ಮಜಲು, ರಮೇಶ್ ರಾವ್ ಮಂಚಿ, ಕೇಶವ, ಉಪಸ್ಥಿತರಿದ್ದರು.
btl bjp (3)

By suddi9

Leave a Reply

Your email address will not be published. Required fields are marked *