ಮೂಡುಬಿದಿರೆ: ಪ್ರೀತಿಸಿದ ಯುವತಿಯನ್ನು ಪ್ರಿಯತಮನೆ ಬರ್ಬರವಾಗಿ ಹತ್ಯೆಗೈದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.

IMG-20180928-WA0037

ಪ್ರಾಂತ್ಯ ಶಾಲೆಯ ಎದುರುಗಡೆಯಿರುವ ಸಿಕ್ವೇರಾ ಕಂಪೌಂಡ್‍ನ ಬಾಡಿಗೆ ಮನೆ ನಿವಾಸಿ ಚಂಪಾವತಿ ಅವರ ಪುತ್ರಿ ಚರಿಷ್ಮಾ ಆರ್.ಕರ್ಕೇರಾ (21ವ) ಹತ್ಯೆಗೀಡಾದ ಯುವತಿ. ಮಂಗಳೂರು ಬಜಾಲ್ ತಂದೊಳಿಗೆ ನಿವಾಸಿ ಲೋಹಿತ್ ಅಲಿಯಾಸ್ ಮುನ್ನಾ (22) ಯುವತಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ. ಮಂಗಳೂರಿನ ಖ್ಯಾತ ನೃತ್ಯ ತಂಡವೊಂದರಲ್ಲಿ ಮಿಂಚಿದ್ದ ಚರಿಷ್ಮ ಕರ್ಕೇರ ಕಳೆದ ಕೆಲವು ವರ್ಷಗಳಿಂದ ಬಜಾಲ್ ನಿವಾಸಿ ಲೋಹಿತ್‍ನನ್ನು ಪ್ರೀತಿಸುತ್ತಿದ್ದರು. ಆದರೆ ಇಂದು ಇದ್ದಕ್ಕಿದ್ದಂತೆ ಆಕೆ ಪ್ರಿಯತಮನಿಂದಲೇ ಬರ್ಬರವಾಗಿ ಮಾರಕಾಸ್ತ್ರದಿಂದ ಕಡಿದು ಹತ್ಯೆಗೆ ಒಳಗಾಗಿದ್ದಾಳೆ.

lohith (1)
ವೃತ್ತಿಯಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದ ಲೋಹಿತ್ , ಚರಿಷ್ಮಾ ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಗಮನಿಸಿ ಶುಕ್ರವಾರ ಚರಿಷ್ಮಾ ಮನೆಗೆ ಬಂದಿದ್ದು, ಬೆಳಗ್ಗೆ 11ರ ವೇಳೆಗೆ ಮನೆಯಲ್ಲಿ ಏಕಾಂಗಿಯಾಗಿದ್ದ ಚರಿಷ್ಮಾಳ ಹಣೆ, ತಲೆಗೆ ಸುತ್ತಿಗೆಯಿಂದ ಬಡಿದು, ಕುತ್ತಿಗೆಗೆ ಇರಿದು ಕೊಲೆಗೆ ಯತ್ನಿಸಿದ್ದಾನೆ. ಆಕೆ ಕಿರುಚಿಕೊಂಡು ಹೊರಗೆ ಬಂದಾಗ ಸ್ಥಳೀಯರು ಧಾವಿಸಿ ಬಂದು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

crime photo (10)

ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಆ ಮನೆಯಲ್ಲಿದ್ದ ಲೋಹಿತ್ ಬೆಡ್‍ರೂಂನಲ್ಲಿ ನೈಲಾನ್ ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.

crime photo (3)

ಲೋಹಿತ್ ಈಕೆಗೆ ದೂರ ಸಂಬಂಧಿಯಾಗಿದ್ದು, ಚರಿಷ್ಮಾತಾಯಿ ಮುಂದೆ ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ಅವರೀಗ ಬಾಡಿಗೆ ಮನೆಯಲ್ಲಿ ವಾಸವಿರುವುದರಿಂದ, ಮುಂದೆ ಸ್ವಂತ ಮನೆ ಕಟ್ಟುವ ಯೋಚನೆ ಇದ್ದು, ನಂತರವೇ ಮದುವೆ ಮಾಡುವುದಾಗಿ ಹೇಳಿದ್ದರು. ಲೋಹಿತ್ ಪದೆ ಪದೆ ಪೀಡಿಸುತ್ತಿದ್ದರಿಂದ ಚರಿಷ್ಮಾ ಆತನ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ಆಕೆಯ ತಾಯಿ ಚಂಪಾವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

crime photo (9)

ಪಿಯುಸಿ ಮುಗಿಸಿ ಮನೆಯಲ್ಲಿದ್ದ ಚರಿಷ್ಮಾ ನೃತ್ಯ ತರಬೇತಿ ಪಡೆದಿದ್ದು, ಉನ್ನತ ಶಿಕ್ಷಣದ ಚಿಂತನೆ ನಡೆಸುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ನೃತ್ಯ ಸಾಧನೆಯ ಹಂಬಲದಲ್ಲಿದ್ದಳು. ಆಕೆಯ ತಾಯಿ ಕಾರ್ಕಳ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಯಾಗಿದ್ದು, ಸಹೋದರ ಮಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಇಬ್ಬರೂ ಕೆಲಸಕ್ಕೆ ತೆರಳಿದ್ದ ಸಂದರ್ಭ ಕೃತ್ಯ ನಡೆದಿದೆ.

crime photo (11)
ಮಂಗಳೂರಿನಿಂದ ತನ್ನ ದ್ವಿಚಕ್ರವಾಹನದಲ್ಲಿ ಬಂದಿದ್ದ ಲೋಹಿತ್ ಅದನ್ನು ಚರಿಷ್ಮಾ ಮನೆಯ ಹಿಂದೆ ನಿಲ್ಲಿಸಿದ್ದ. ವಾಹನವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

crime photo (5)
ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ರಾಜೇಂದ್ರ, ಮೂಡುಬಿದಿರೆ ಪೊಲೀಸ್ ಇನ್ಸ್‍ಪೆಕ್ಟರ್ ರಾಮಚಂದ್ರ ನಾಯಕ್, ಎಸ್‍ಐ ದೇಜಪ್ಪ ಸಹಿತ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಮತ್ತಿತ್ತರು ಭೇಟಿ ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *