ಬಂಟ್ವಾಳ: ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ 125ನೇ ಜಯಂತಿಯನ್ನು ಆಚರಿಸಿಕೊಳ್ಳುತ್ತಿರುವ ಯುವಾಬ್ರಿಗೇಡ್ ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ರಥಯಾತ್ರೆ ನಡೆಯುತ್ತಿದ್ದು ಸೆ.25ರಂದು ಬಿ.ಸಿ ರೋಡಿಗೆ ಆಗಮಿಸಿದ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಕ್ಷೇತ್ರ ಸಮಿತಿಯ ವತಿಯಿಂದ ರಥಯಾತ್ರೆಯನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ ,ಜಿಲ್ಲಾ ವಕ್ತಾರಾದ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, , ಕ್ಷೇತ್ರದ ಪ್ರ.ಕಾರ್ಯದರ್ಶಿಯಾದ ಮೋನಪ್ಪ ದೇವಸ್ಯ ಮತ್ತು ರಾಮದಾಸ್ ಬಂಟ್ವಾಳ, ಕ್ಷೇತ್ರದ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ , ವಿಜಯ ರೈ, ನಾರಾಯಣ ಪೂಜಾರಿ ಬೊಲ್ಲುಕಲ್ಲು, ಕ್ಷೇತ್ರ ಕಾರ್ಯದರ್ಶಿಯಾದ ಸೀತಾರಾಮ ಪೂಜಾರಿ, ಪ್ರಕಾಶ್ ಅಂಚನ್, ರೊನಾಲ್ಡ್ ಡಿ ಸೋಜ, ಪುರುಷೋತ್ತಮ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಅಭಿಷೇಕ್ ರೈ,ಶಿವಪ್ಪ ಗೌಡ, , ಗೋಪಾಲ ಸುವರ್ಣ, ಮಹೇಶ್ ಶೆಟ್ಟಿ, ವಿಠಲ ಅಲ್ಲಿಪಾದೆ ಮುಂತಾದವರು ಉಪಸ್ಥಿತರಿದ್ದರು.


