ವಿಟ್ಲ: ಅಧ್ಯಾಪಕರ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯು ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ಸೆ.23 ರಂದು ನಡೆಯಿತು. ಸಂಘವು ಸದರಿ ವರ್ಷದಲ್ಲಿ 1,77,03,715.84 ಲಾಭ ಗಳಿಸಿದ್ದು 19% ಡಿವಿಡೆಂಡ್ ನೀಡುವುದಾಗಿ ತೀರ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ ಮೋನಪ್ಪ ವಹಿಸಿದ್ದರು.

Teachers Co-operative society (2)
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಶಂಕರ ಭಟ್, ಕರ್ನಾಟಕ ಸರಕಾರಿ ನೌಕರರ ಸಂಘ ಬಂಟ್ವಾಳ ಇದರ ಅಧ್ಯಕ್ಷ ಉಮಾನಾಥ ರೈ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಿನ್ನಪ್ಪ ಇವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಇನ್ನಾ ಪ್ರಕಾಶ್ ರಾವ್, ಶಂಕರ ಮಧ್ಯ, ಡಾ| ಸಿದ್ಧರಾಜು ಮತ್ತು ಯಾಕೂಬ್, ಜಿಲ್ಲಾ ಪ್ರಶಸ್ತಿ ವಿಜೇತರಾದ ವಿಲ್ಮಾ ಸಿಕ್ವೇರಾ, ವಿನಯ ಕುಮಾರ್ ಎಂ, ಸಂಜೀವ ಎನ್, ಗೋಪಾಲಕೃಷ್ಣ ತುಳುಮಳೆ, ಲಿಲ್ಲಿ ಪಾೈಸ್, ಸೀತಾರಾಮ, ಮುದರ ಬೈರ ಎನ್. ಬಾಲಕೃಷ್ಣ ಗೌಡ, ವನಿತ ಕುಮಾರಿ ಮತ್ತು ಚೆನ್ನಪ್ಪ ಗೌಡ ಮತ್ತು ಚೆಸ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದ ಯಶಸ್ವಿ ಇವರನ್ನು ಸನ್ಮಾನಿಸಲಾಯಿತು.

Teachers Co-operative society (1)
ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರ ಕೆ ರಮೇಶ್ ನಾಯಕ್, ನಿರ್ದೇಶಕರುಗಳಾದ ಎನ್ ಆನಂದ, ಕಮಲಾಕ್ಷ, ನವೀನ್ ಕೆ, ಕುಂಞ ನಾಯ್ಕ, ಸಂಜೀವ ಹೆಚ್, ಜಗನ್ನಾಥ ಎಂ, ಬಾಬು ಗೌಡ, ಸುರೇಶ್ ಕುಮಾರ್, ಪ್ರಭಾಕರ, ಜೆಸಿಂತಾ ಸೋಫಿಯಾ ಮಸ್ಕರೇನಸ್ ಮತ್ತು ಚಿತ್ರಕಲಾ ಉಪಸ್ಥಿತರಿದ್ದರು.
ಅಕ್ಷತಾ ಭಟ್ ಮತ್ತು ನವನೀತ ಕೆ ಜಿ ಪ್ರಾರ್ಥಿಸಿದರು. ಅಧ್ಯಕ್ಷ ಮೋನಪ್ಪ ಕೆ ಸ್ವಾಗತಿಸಿದರು. ಜನರಲ್ ಮ್ಯಾನೇಜರ್ ಕೃಷ್ಣಪ್ರಕಾಶ್ ವರದಿ ಮಂಡಿಸಿದರು. ಉಪಾಧ್ಯಕ್ಷ ರಾಜೇಂದ್ರ ರೈ ವಂದಿಸಿದರು. ನಿರ್ದೇಶಕ ಶೇಷಪ್ಪ ಮೂಲ್ಯ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *