ಬಂಟ್ವಾಳ: ‘ಕೆರೆಯ ನೀರು ಕೆರೆಗೆ ಚೆಲ್ಲಿ’ ಎಂಬಂತೆ ಸಮಾಜದಲ್ಲಿ ಜನರಿಂದಲೇ ಬೆಳೆಯುವ ಕಲಾವಿದರು ಉಚಿತ ‘ಯಕ್ಷ ಹಾಸ್ಯ ವೈಭವ’ ಎಂಬ ತುಳು ಯಕ್ಷಗಾನ ಪ್ರದರ್ಶಿಸಿ ಕೊಡಗು ನೆರೆ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸಿ ಸಮರ್ಪಿಸುತ್ತಿರುವುದು ಸ್ತುತ್ಯರ್ಹ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಇಲ್ಲಿನ ಬಿ.ಸಿ.ರೋಡು ಸ್ಪರ್ಶಾ ಕಲಾ ಮಂದಿರದಲ್ಲಿ ಕೊಡಗು ನೆರೆ ಸಂತ್ರಸ್ತರ ನಿಧಿ ಸಂಗ್ರಹಕ್ಕಾಗಿ ಶನಿವಾರ ರಾತ್ರಿ ಉಚಿತ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

23btl-Kodagu
ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮಾತನಾಡಿ, ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮೂಲಕ ಕಲಾವಿದರು ಕೂಡ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಸಹಕಾರ ಭಾರತಿ ಸದಸ್ಯ ವಕೀಲ ಪ್ರಸಾದ್ ಕುಮಾರ್ ರೈ ಇವರ ಮೂಲಕ ಕೊಡಗು ನೆರೆ ಸಂತ್ರಸ್ತರಿಗೆ ರೂ.57,808 ಮೊತ್ತದ ನಿಧಿ ಸಮರ್ಪಿಸಲಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶಿವಪ್ರಸಾದ್ ಎಡಪದವು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ-ಚೆಂಡೆ, ಹರಿಪ್ರಸಾದ್ ಇಚಿಲಂಪಾಡಿ-ಮದ್ದಳೆ, ಶಶಿಧರ ಬಾಚಕೆರೆ-ಚಕ್ರತಾಳ, ಮುಮ್ಮೇಳದಲ್ಲಿ ಚಿತ್ರನಟ ಅರವಿಂದ ಬೋಳಾರ್ ಸಹಿತ ಪ್ರಮುಖರಾದ ಶಂಭು ಕುಮಾರ್ ಕಿನ್ನಿಗೋಳಿ, ಮುರಳೀಧರ ಕನ್ನಡಿಕಟ್ಟೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಕೋಡಪದವು ದಿನೇಶ್ ಕುಮಾರ್, ಬಂಗಾಡಿ ಸುಂದರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘಟಕರಾದ ಕಲಾವಿದ ಅಶೋಕ ಶೆಟ್ಟಿ ಸರಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಂಜು ವಿಟ್ಲ ವಂದಿಸಿದರು. ಸುಭಾಶ್ಚಂದ್ರ ಜೈನ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *