ಮೂಡುಬಿದಿರೆ: ನಮ್ಮ ದೇಶದಲ್ಲಿರುವ ಸಾಂಸ್ಕøತಿಕ ಚಿಂತನೆ, ಆಚರಣೆಗಳನ್ನು ವಿಶ್ವದ ಇನ್ನಾವುದೇ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾವು ಈ ದೇಶದಲ್ಲಿದ್ದೇವೆ. ನಮ್ಮ ದೇಶದ ಧಾರ್ಮಿಕ ಚಿಂತನೆಗಳು ಮತ್ತು ಭಾವನೆಗಳ ಮೇಲೆ ಇತರರಿಂದ ನಿರಂತರ ದಕ್ಕೆಯಾದರೂ ಇದನ್ನೆಲ್ಲವನ್ನೂ ಸಹಿಸಿಕೊಂಡು ನಮ್ಮ ಧಾರ್ಮಿಕ ಭಾವನೆ ಗಟ್ಟಿಯಾಗಿಯೇ ಉಳಿದಿದೆ. ಧರ್ಮವನ್ನೇ ಮುಂದಿಟ್ಟುಕೊಂಡು ಸಾಮರಸ್ಯದ ಬದುಕನ್ನು ನಡೆಸಬೇಕೆನ್ನುವ ನಮ್ಮ ಹಿರಿಯರ ಉದ್ದೇಶ ನಿರಾತಂಕವಾಗಿ ನಡೆಯುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ನುಡಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಹಾವೀರ ನಗರ ಹೊಂಪೆಟ್ಟು, ಮಾಂಟ್ರಾಡಿಯಲ್ಲಿ ನಡೆದ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮೂಡುಬಿದಿರೆ ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಭೆಯ ಅಧ್ಯಕ್ಷತೆವಹಿಸಿದರು.
ಶಿರ್ತಾಡಿ ಶಿಮುಂಜೆಗುತ್ತು ಎಸ್. ಡಿ. ಸಂಪತ್ ಸಾಮ್ರಾಜ್ಯ, ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ತೋಡಾರು ದಿವಾಕರ ಶೆಟ್ಟಿ, ಜೈನ್ ಟ್ರಾವೆಲ್ಸ್ ಮಾಲಕ ರತ್ನಾಕರ ಜೈನ್, ಸಮಿತಿಯ ಗೌರವಾಧ್ಯಕ್ಷ ಹರೀಶ್ ಬಳೆಂಜ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಲೂಯಿಸ್ ಡಿ’ಸಿಲ್ವ, ನಿವೃತ್ತ ಶಿಕ್ಷಕಿ ಜೆನೆಟ್ ಲೋಬೋ, ನೃತ್ಯ ಪ್ರತಿಭೆ ಅಳಿಯೂರು ರಜತಾ ಜೈನ್, ಪಾಕತಜ್ಞ ವಾಲ್ಪಾಡಿ ಅಜಿತ್ ಕುಮಾರ್ ಜೈನ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರೇಮ್ ಕುಮಾರ್ ಹೊಸ್ಮಾರ್, ಅಧ್ಯಕ್ಷ ಧನಂಜಯ ಆಳ್ವ ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.
ಸತೀಶ್ ಹೊಸ್ಮಾರ್ ಮತ್ತು ಪ್ರಶಾಂತ್ ಕುಮಾರ್ ಜೈನ್ ಸನ್ಮಾನಪತ್ರ ವಾಚಿಸಿದರು. ಅಳಿಯೂರು ಆದಿರಾಜ ಜೈನ್ ಸಹಕರಿಸಿದರು. ಕಾರ್ಯಕ್ರಮವನ್ನು ಪ್ರೇಮ್ ಕುಮಾರ್ ಹೊಸ್ಮಾರ್ ಸ್ವಾಗತಿಸಿದರು. ಧರಣೇಂದ್ರ ಬೆಳ್ತಂಗಡಿ ನಿರೂಪಿಸಿ, ಧನಂಜಯ ಆಳ್ವ ವಂದಿಸಿದರು.

