ಮೂಡುಬಿದಿರೆ: ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯಲ್ಲಿ ಪ್ರತಿವರ್ಷವು ನಡೆಯುತ್ತಿರುವ ನಾಡು-ನುಡಿ-ಸಂಸ್ಕøತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಕನ್ನಡ ಬಾಂಧವರ ಸಹಾಯ-ಸಹಕಾರ-ಪ್ರೀತಿ-ವಿಶ್ವಾಸಗಳೊಂದಿಗೆ ಕಳೆದ 14 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಇದೀಗ 15ನೇ ವರ್ಷ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದೆ. ಈ ಸಮ್ಮೇಳನವು ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಾಗಿರದೆಕನ್ನಡದ ವಿರಾಟ್ ಸ್ವರೂಪದಅಭಿವ್ಯಕ್ತಿಯಾಗಿಜನಮನದ ಗಮನಸೆಳೆಯುತ್ತಿದೆ. ಈ ಬಾರಿಯ ಪ್ರಧಾನ ಪರಿಕಲ್ಪನೆ ಕರ್ನಾಟಕದರ್ಶನ- ಬಹುರೂಪಿ ಆಯಾಮಗಳು ಆಗಿದೆ.

NUDISIRI logo
ಈ ಬಾರಿಯ ಆಳ್ವಾಸ್ ನುಡಿಸಿರಿ-2018 ಸಮ್ಮೇಳನವು ನವೆಂಬರ್ 16, 17 ಮತ್ತು 18 ರಂದು ಮೂಡುಬಿದಿರೆಯ ವಿದ್ಯಾಗಿರಿಯ ಶ್ರೀಮತಿ ಸುಂದರಿಆನಂದ ಆಳ್ವ ಆವರಣದಲ್ಲಿರುವ ಕವಿ ರತ್ನಾಕರವರ್ಣಿ ವೇದಿಕೆ, ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ನಡೆಯಲಿದೆ.

m ghanti3
ಆಳ್ವಾಸ್ ನುಡಿಸಿರಿ 2018ರ ಸರ್ವಾಧ್ಯಕ್ಷರಾಗಿಡಾ.ಮಲ್ಲಿಕಾಎಸ್.ಘಂಟಿ ಆಯ್ಕೆಯಾಗಿದ್ದಾರೆ. ಮೂಲತಃ ಇವರು ವಿಜಯಪುರಜಿಲ್ಲೆಯ ಬಸವನಬಾಗೇವಾಡಿತಾಲೂಕಿನ ಅಗಸಬಾಳುನವರಾಗಿದ್ದಾರೆ. ಪ್ರಾಧ್ಯಾಪಕಿ, ಸಾಹಿತಿ, ವಿಮರ್ಶಕಿ, ಸಂಶೋಧಕಿ, ಸಂಪಾದಕಿಯಾಗಿ ಬಹುಮುಖ ಪ್ರತಿಭೆಯಾಗಿರುವ ಇವರು ಸಮರ್ಥ ಆಡಳಿತಗಾರರಾಗಿಯೂ ಸಂಘಟಕರಾಗಿಯೂಕನ್ನಡಪರಹೋರಾಟಗಾರರಾಗಿಯೂ ಹೆಸರುವಾಸಿಯಾದವರು.

sha shettar
ಆಳ್ವಾಸ್ ನುಡಿಸಿರಿ 2018ರ ಉದ್ಘಾಟಕರಾಗಿಡಾ. ಷ.ಶೆಟ್ಟರ್ ಆಯ್ಕೆಯಾಗಿದ್ದಾರೆ. ಇತಿಹಾಸ ಮತ್ತು ಸಾಹಿತ್ಯಗಳಲ್ಲಿ ಸಮಾನಆಸಕ್ತಿಯನ್ನು ಹೊಂದಿರುವ ಶೆಟ್ಟರ್‍ಚರಿತ್ರೆ ಮತ್ತು ಸಾಹಿತ್ಯ ಚರಿತ್ರೆಗಳನ್ನು ಮುರಿದುಕಟ್ಟುವ ಕೆಲಸದಲ್ಲಿ ಅವಿಶ್ರಾಂತರಾಗಿ ಕಾರ್ಯ ನಿರ್ವಹಿಸಿರುತ್ತಾರೆ.

ಆಳ್ವಾಸ್ ನುಡಿಸಿರಿ 2018ರ ಸಮ್ಮೇಳನದಲ್ಲಿ ವಿದ್ಯಾರ್ಥಿ ಪ್ರತಿನಿದಿಗಳುü ಶುಲ್ಕವಿಲ್ಲದೆ ಸಂಪೂರ್ಣಉಚಿತವಾಗಿ ಭಾಗವಹಿಸಬಹುದು. ಭಾಗವಹಿಸುವ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಪತ್ರವನ್ನು ಹೊಂದಿರಬೇಕು. ಇತರರಿಗೆ ಮೂರು ದಿನಗಳ ಊಟ, ವಸತಿಗಳು ಉಚಿತವಾಗಿದ್ದು ರೂ.100 ಪ್ರತಿನಿಧಿ ಶುಲ್ಕದೊಂದಿಗೆ ಸಮ್ಮೇಳನವನ್ನು ಕಣ್ತುಂಬಿಸಿಕೊಳ್ಳಬಹುದು. ಖ್ಯಾತ ಸಾಹಿತಿಗಳು, ವಿಮರ್ಶಕರು, ಸಂಶೋಧಕರು, ಕಲಾವಿದರು ಹಾಗೂ ಕನ್ನಡ ಬಾಂಧವರು ಒಟ್ಟು ಸೇರುವ ಈ ಸಮ್ಮೇಳನಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಎಂದು ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08258-261229, Email : nudisiri@alvas.org

By Suddi9

Leave a Reply

Your email address will not be published. Required fields are marked *