ಮೂಡುಬಿದಿರೆ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಮಾಜಮಂದಿರದಲ್ಲಿ ನಡೆದ 55ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಗ್ರಹ ವಿಸರ್ಜನೆ ಶೋಭಾಯಾತ್ರೆಯು ಸೋಮವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು.

shobhayatre (5)

FB_IMG_15371967302103514

ಮಹಾಗಣಪತಿ ದೇವರ ವಿಗ್ರಹವನ್ನು ಹೊತ್ತ ಸಾಲಂಕೃತ ವಾಹನವು ನಿಶ್ಮಿತಾ ಸರ್ಕಲ್‍ನಿಂದ ಹೊರಟು ಮುಖ್ಯರಸ್ತೆಯ ಮೂಲಕ ಹಳೆ ಪೋಲೀಸ್ ಠಾಣೆ, ಕಲ್ಸಂಕ, ಜೈನ್ ಪೇಟೆಯ ಮೂಲಕ ಸಾಗಿ ಅಲಂಗಾರ್ ಮಹಾಲಿಂಗೇಶ್ವರ ದೇವಸ್ಥಾನದ ಮಾನಸ ಸರೋವರದಲ್ಲಿ ಧಾರ್ಮಿಕ ವಿದಿ-ವಿಧಾನಗಳೊಂದಿಗೆ ಜಲಸ್ಥಂಭನಗೊಳಿಸಲಾಯಿತು.

shobhayatre (1)

shobhayatre (15)

shobhayatre (12)

shobhayatre (4)
ಹತ್ತಾರು ಸ್ಥಬ್ಧ ಚಿತ್ರಗಳು, ರೂಪಕಗಳು ಶೋಭಾಯಾತ್ರೆಗೆ ಇನ್ನಷ್ಟು ಮೆರಗು ನೀಡಿದವು. ಸಮಿತಿಯ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಸಂಚಾಲಕ ರಾಜಾರಾಮ್ ನಾಗರಕಟ್ಟೆ, ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ., ಪದಾಧಿಕಾರಿಗಳಾದ ಕುಲದೀಪ ಎಂ., ಕೆ. ಕೃಷ್ಣರಾಜ ಹೆಗ್ಡೆ, ಶ್ರೀಪತಿ ಭಟ್, ಯತಿರಾಜ್ ಶೆಟ್ಟಿ, ಲಕ್ಷ್ಮಣ ಪೂಜಾರಿ ಮತ್ತಿತರು ಮೆರವಣಿಗೆಯಲ್ಲಿ ಭಾಗವಹಿಸಿದರು.

ganeshothsava

shobhayatre (3)
ಮೂಡುಬಿದಿರೆ ಹಾಗೂ ಆಸುಪಾಸಿನ ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಐದು ದಿನಗಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ನಡೆದವು.

By Suddi9

Leave a Reply

Your email address will not be published. Required fields are marked *