ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದಲ್ಲಿ ಗುರುವಾರ ಸಾರ್ವಜನಿಕ ಗಣಶೋತ್ಸವ ವತಿಯಿಂದ ನಡೆದ 55ನೇ ವರ್ಷದ ಮೂಡುಬಿದಿರೆ ಗಣೇಶೋತ್ಸವ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಬೃಹತ್ ಗಣೇಶ ಮೂರ್ತಿಯನ್ನು ಮೆರವಣಿಗೆಯ ಮೂಲಕ ತರಲಾಯಿತು.

mbd ganapathi

ಮುಖ್ಯ ಅತಿಥಿಯಾಗಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಡಿಸಿಪಿ ಉಮಾಪ್ರಶಾಂತ್ ಮಾತನಾಡಿ, ಗಣೇಶೋತ್ಸವ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕøತಿಯ ಪ್ರತೀಕ. ಸಾಮರಸ್ಯದ ಬದುಕಿಗೆ ಇಂತಹ ಹಬ್ಬಗಳು ಒಳ್ಳೆಯ ಸಂದೇಶವನ್ನು ನೀಡುತ್ತವೆ. ಪ್ರತಿಯೊಬ್ಬರು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಬೇಕು. ಗುರುಹಿರಿಯರನ್ನು ಗೌರವಿಸಿ, ಈ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಬೇಕು. ಈ ವಿಚಾರದಲ್ಲಿ ಯುವಕರು ಹೆಚ್ಚು ಮುಂದೆ ಬಂದು ಸಂಸ್ಕøತಿ ಉಳಿಸುವಲ್ಲಿ ಪಾತ್ರ ವಹಿಸಬೇಕು. ಮಡಿಕೇರಿಯಲ್ಲಿ ನಡೆದ ಅತಿವೃಷ್ಟಿಯನ್ನು ಉಲ್ಲೇಖಿಸಿದ ಅವರು ಸಮಾಜದ ಜತೆಗೆ ಪ್ರಕೃತಿಯನ್ನು ನಾವು ಪ್ರೀತಿಸಬೇಕು ಎಂದು ಹೇಳಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತಣಾಡಿ, ಸಾರ್ವಜನಿಕ ಮೂಡುಬಿದಿರೆ ಗಣೇಶೋತ್ಸವದಲ್ಲಿ ಎಲ್ಲಾ ಜಾತಿ ಧರ್ಮದವರು ಭಾಗವಹಿಸುತ್ತಿರುವುದು ಇಲ್ಲಿನ ವಿಶೇಷ ಎಂದರು.
ಸಮಿತಿ ಸಂಚಾಲಕ ರಾಜರಾಮ್ ಐದು ದಿನಗಳ ಕಾರ್ಯಕ್ರಮದ ಮಾಹಿತಿ ನೀಡಿದರು.
ಚೌಟರ ಅರಮನೆಯ ಕುಲದೀಪ್ ಎಂ, ಸಮಿತಿ ಉಪಾಧ್ಯಕ್ಷ ಕೆ. ಶ್ರೀಪತಿ ಭಟ್, ಇನ್ನರ್ ವೀಲ್ ಕ್ಲಬ್‍ನ ಮಾಜಿ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ವಕೀಲ ಚೇತನ್ ಕುಮಾರ್ ಶೆಟ್ಟಿ ಭಗವಾಧ್ವಜಾರೋಹಣ ನೆರವೇರಿಸಿದರು. ಅಲಂಗಾರ್ ಈಶ್ವರ್ ಭಟ್ 55ನೇ ವರ್ಷದ ಗಣಪತಿ ವಿಗ್ರಹದ ಪ್ರತಿಷ್ಠಾಪನೆ ನೆರವೇರಿಸಿದರು. ಮಾಸ್ತಿಕಟ್ಟೆಯ ವಸಂತ ರಾವ್ ಗಣಪತಿಗೆ ಚಿನ್ನದ ಉಂಗುರವನ್ನು ಸಮರ್ಪಿಸಿದರು.

By Suddi9

Leave a Reply

Your email address will not be published. Required fields are marked *