ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಗ್ರಾ.ಪಂ.ನರಿಕೊಂಬು, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ, ಸ್ತ್ರೀ ಶಕ್ತಿ ಗೊಂಚಲು ಶಂಭೂರು ಇವರ ಸಂಯುಕ್ತ ಆಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಪ್ರಧಾನಮಂತ್ರಿ ಮಾತ್ರವಂದನಾ ಯೋಜನೆ ಯ ಸಪ್ತಾಹ ಆಚರಣೆ ಮತ್ತು ಬೇಟಿ ಬಚಾವೋ ಬೇಟಿ ಪಡಾವೋ ಜಾಗ್ರತಿ ಅರಿವು ಕಾರ್ಯಕ್ರಮ ನರಿಕೊಂಬು ಗ್ರಾಮ ಪಂಚಾಯತ್ ಅದ್ಯಕ್ಷ ಯಶೋಧರ ಕರ್ಬೆಟ್ಟು ಅವರ ಅದ್ಯಕ್ಷ ತೆಯಲ್ಲಿ  ಶಂಭೂರು ವ್ಯಾಯಾಮ ಶಾಲೆಯಲ್ಲಿ ನಡೆಯಿತು.VKS_7904
ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷೀ ಕೆ ಪೂಜಾರಿ, ತಾ.ಪಂ.ಸದಸ್ಯೆ ಗಾಯತ್ರಿರವೀಂದ್ರ ಸಪಲ್ಯ, ಗ್ರಾ.ಪಂ.ಸದಸ್ಯ ರಾದ ಜಯರಾಜ್, ದಿವಾಕರ ಶಂಭೂರು, ಉದಯ ಶಾಂತಿ, ಹೇಮಲತಾ , ಕಿಶೋರ್ ಶೆಟ್ಟಿ, ನರಿಕೊಂಬು ಗ್ರಾಮ‌ಪಂಚಾಯತ್ ಕಾರ್ಯದರ್ಶಿ ಶಿವ, ರಾಮಾಂಜನೇಯ ವ್ಯಾಯಾಮ ಶಾಲೆಯ ಅದ್ಯಕ್ಷ ಆನಂದ ಶಂಭೂರು, ಬಾಳ್ತಿಲ ಆರೋಗ್ಯ ಕಾರ್ಯಕರ್ತ ವಿರೇಶ್, ಅಂಜನೇಯ ಮಹಿಳಾ ಮಂಡಲ ದ ಅದ್ಯಕ್ಷೆ ಭವಾನಿ, ಶಂಭೂರು ಗೊಂಚಲಿನ ಅದ್ಯಕ್ಷೆ ಪುಷ್ಪ ಲತಾ, ಸಂಪನ್ಮೂಲ ವ್ಯಕ್ತಿ ಗಳಾದ ಬಾಳ್ತಿಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿಘ್ನೇಶ್ವರ ವಿ.ಕೆ. ಬಿಸಿರೋಡು ಶಾಂತ್ವನ ಕೇಂದ್ರ ದ ಸಿಬ್ಬಂದಿ ಗೀತಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವರ್ಗಾವಣೆ ಗೊಂಡಿರುವ ಶಂಭೂರು ಕೇಂದ್ರ ದ ಕಿರಿಯ ಆರೋಗ್ಯ ಸಹಾಯಕಿ ಸುಮನ ಕ್ರಾಸ್ತ, ಹಾಗೂ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸಿಬ್ಬಂದಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ವಾರಿಜ ಜಿ.ಎಸ್.ಸ್ವಾಗತಿಸಿ, ಕಾರ್ಯಕರ್ತೆ ಶಾಂತಿ ವಂದಿಸಿದರು.ಮೇಲ್ವಿಚಾರಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *