ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನ ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಕಾಮರ್ಸ್-ಮ್ಯಾನೇಜ್ಮೆಂಟ್ ಫೆಸ್ಟ್ ಸ್ಪಾರ್ಕ್- 2018 ಆಯೋಜಿಸಲಾಯಿತು.
ಮೈಟ್ ಕಾಲೇಜಿನ ಎಂ.ಬಿ.ಎ ವಿಭಾಗದ ಮುಖ್ಯಸ್ಥ ಡಾ.ಜಯದೇವ ಪ್ರಸಾದ್ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ ರವೀಶ್ ಕುಮಾರ್ ವಹಿಸಿದ್ದರು.

davala clg fest
ವಿದ್ಯಾರ್ಥಿಗಳ ಭಿತ್ತಿ ಪತ್ರಿಕೆಯ ಲೇಖನಗಳ ಸಂಚಿಕೆ ‘ವಿಭವ’ವನ್ನು ಮುಖ್ಯ ಅತಿಥಿಯಾಗಿದ್ದ ಜಯದೇವ ಪ್ರಸಾದ್ ಅನಾವರಣಗೊಳಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಐಸ್ ಬ್ರೇಕರ್, ಹ್ಯುಮನ್ ರಿಸೋರ್ಸ್, ಫೈನಾನ್ಸ್, ಬೆಸ್ಟ್ ಮ್ಯಾನೇಜರ್, ಬಿಸಿನೆಸ್ ಕ್ವಿಜ್ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಕಾರ್ಯದರ್ಶಿ ರಂಜಿತ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಮಹಾವೀರ ಅಜ್ರಿ ಪ್ರಸ್ತಾವನೆಗೈದರು. ಸಹ್ಯಾದ್ರಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ ಆಸೋಸಿಯೇಟ್ ಪ್ರೊಪೆಸರ್ ಡಾ.ವಿದ್ಯಾವತಿ, ಆಳ್ವಾಸ್ ಕಾಲೇಜಿನ ಸ್ವಾತಿ ಭಟ್, ಕಾರ್ಕಳ ಎಂ.ಪಿ.ಎಂ ಕಾಲೇಜಿನ ಅಕ್ಷತಾ ರಾವ್ ತೀರ್ಪುಗಾರರಾಗಿ ಸಹಕರಿಸಿದ್ದರು. ವಾಣಿಜ್ಯ ಸಂಘದ ಕಾರ್ಯದರ್ಶಿ ಹೆಲೆನ್ ಗ್ಲೆನ್ ಪಿಂಟೊ ವಂದಿಸಿದರು.

By suddi9

Leave a Reply

Your email address will not be published. Required fields are marked *