ಮೂಡುಬಿದಿರೆ: ವಾಲ್ಪಾಡಿಯ ಪಟ್ಲ ಫ್ರೆಂಡ್ಸ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾಲ್ಕನೇ ವರ್ಷದ ಮೊಸರು ಕುಡಿಕೆ ಉತ್ಸವವು ವಾಲ್ಪಾಡಿಯ ಪಟ್ಲ ಬಳಿ ನಡೆಯಿತು.

ಶಿರ್ತಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಫ್ರೆಡ್ರಿಕ್ ಪಿಂಟೊ ಕಾರ್ಯಕ್ರಮವನ್ನು ಉದ್ಘಾಟಿಸಿ ಧಾರ್ಮಿಕ ಆಚರಣೆಯಲ್ಲಿ ಯುವಕರು ಮತ್ತು ಸಂಘಟನೆಗಳ ಪಾತ್ರದ ಬಗ್ಗೆ ವಿವರಿಸಿದರು.
ಪತ್ರಕರ್ತ ಅಶ್ರಫ್ ವಾಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಲಕ್ಷ್ಮಣ ಸುವರ್ಣ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಎಸ್. ಪಾಂಡ್ರು, ವಾಲ್ಪಾಡಿ ಸತ್ಯ ಸಾರಮಣಿ ಸಂಘದ ಸ್ಥಾಪಕಾಧ್ಯಕ್ಷ ಬಾಬು ಜೋಗೊಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಟ್ಲ ಫ್ರೆಂಡ್ಸ್ ಅಧ್ಯಕ್ಷ ಮುತ್ತಯ್ಯ, ಉಪಾಧ್ಯಕ್ಷ ಕರಿಯ, ಕಾರ್ಯದರ್ಶಿ ಸದಾಶಿವ, ಚೆನ್ನ ನಲ್ಕೆ ಮತ್ತಿತರರು ಉಪಸ್ಥಿತರಿದ್ದರು.
ಈ ಉತ್ಸವದಲ್ಲಿ ಅನ್ನದಾನ ಸೇವಾಕರ್ತರಾದ ಡೊಂಬ ದಂಪತಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಣಿತಾ ವರದಿ ವಾಚಿಸಿದರು. ಪ್ರಕಾಶ್ ಬಿ ನಿರೂಪಿಸಿದರು. ಸಮಿತಿಯ ಗೌರವಾಧ್ಯಕ್ಷೆ ಸುಶೀಲಾ ಸ್ವಾಗತಿಸಿ ವಂದಿಸಿದರು.
