ಮೂಡುಬಿದಿರೆ: ಮಂಗಳೂರಿನ ಕೆನರಾ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಆಳ್ವಾಸ್‍ನ ಪುರುಷರ ತಂಡವು ಫೈನಲ್‍ನಲ್ಲಿ ಎಸ್.ಡಿ.ಎಂ. ಕಾಲೇಜು ಉಜಿರೆ ತಂಡವನ್ನು ಸೋಲಿಸಿ ಸತತ 12ನೇ ಬಾರಿಗೆ ಶ್ರೀ ಕೆಮ್ಮಾರ ಬಾಲಕೃಷ್ಣ ಗೌಡ ಮೆಮೋರಿಯಲ್ ಟ್ರೋಫಿ ಮತ್ತು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸೈಂಟ್ ಫಿಲೋಮಿನಾ ಕಾಲೇಜು ತಂಡವನ್ನು ಸೋಲಿಸಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ನಾಲ್ಕನೇ ಸ್ಥಾನವನ್ನು ಪಡೆದಿದೆ. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವರವರು ಅಭಿನಂದಿಸಿದ್ದಾರೆ.

