ಕೈಕಂಬ : ಹಿಂದೆ ಕುಟುಂಬಕ್ಕೆ ಆಧಾರವಾಗಿದ್ದ ಗುರುಪುರ ಕೈಕಂಬದ ಕಂದಾವರ ನಿವಾಸಿ ಲೋಕಯ್ಯ ಪೂಜಾರಿ ಮಧುಮೇಹದಿಂದ ಕಳೆದ 10 ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದು, ಒಂದು ಕಾಲು ಕಳೆದುಕೊಂಡಿದ್ದಾರೆ. ದಾನಿಗಳ ನಿರೀಕ್ಷೆಯಲ್ಲಿರುವ ಇವರ ದೈನಂದಿನ ಕರ್ಚುವೆಚ್ಚ ಕಂದಾವರ ವಲಯದ ಯುವಕರು ನೋಡಿಕೊಳ್ಳುತ್ತಿದ್ದಾರೆ. ವಸಂತಿ ಹಾಗೂ ಲೋಕಯ್ಯ ದಂಪತಿಗೆ ಮಕ್ಕಳಿಲ್ಲ.
ಸೋಮವಾರ ಇವರ ಮನೆಗೆ ತೆರಳಿದ `ಬಿರುವೆರ್ ಕುಡ್ಲ’ ಬಜ್ಪೆ ಇದರ ಕಂದಾವರ ವಲಯದ ಸದಸ್ಯರು ವೈದ್ಯಕೀಯ ನೆರವು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಘಟಕಾಧ್ಯಕ್ಷ ಶರತ್ ಕೋಟ್ಯಾನ್, ಉಪಾಧ್ಯಕ್ಷ ಚಂದ್ರಶೇಖರ ಅಮೀನ್, ಕಾರ್ಯದರ್ಶಿ ಸೂರಜ್ ಸುವರ್ಣ ಎಕ್ಕಾರು, ಕೋಶಾಧಿಕಾರಿ ರಾಕೇಶ ಅಂಚನ್, ಕಂದಾವರ ವಲಯ ಸಂಚಾಲಕ ಚೇತನ ಬಂಗೇರ, ಸಂತೋಷ ಪೂಜಾರಿ, ಗಣೇಶ ಅಮೀನ್, ಕೆಂಜಾರು-ಕಾನ ವಲಯದ ಪ್ರಶಾಂತ ಕುಮಾರ್, ಚಂದ್ರ ಪೂಜಾರಿ ಪೆರಾರ, ಯೋಗೀಶ ಕಂದಾವರ, ಪುರಂದರ ಕಂದಾವರ, ರಮೇಶ ಕಾಜಿಲ ಮತ್ತು ಯಶೋದರ ಕಂದಾವರ ಇದ್ದರು.
