ಮೂಡುಬಿದಿರೆ: ತುಳಿವಿನ ಉಳಿವಿಗಾಗಿ ವೈಭವದ ಕಾರ್ಯಕ್ರಮ ಸಾಕಾಗದು. ಬಣ್ಣ ಬಣ್ಣದ ಪದಗುಚ್ಛಗಳು ತುಳು ಭಾಷೆಯ ಸಾಹಿತ್ಯದ ಶಕ್ತಿಯಲ್ಲ. ಇಂತಹ ಭ್ರಮೆ ತುಳುವಿಗೆ ಶ್ರೇಯಕರವಲ್ಲ. ತುಳು ಜ್ಞಾನದ ಸಂಗತಿಯಾಗಬೇಕು. ಆಗ ಈ ಭಾಷೆ ಉತ್ಕøಷ್ಟತೆಯಿಂದ ಮೆರೆಯಲು ಸಾಧ್ಯ ಎಂದು ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ತುಳು ಸಂಸ್ಕøತಿ ಅಧ್ಯಯನ ಕೇಂದ್ರದ ವತಿಯಿಂದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು
ತುಳು ಸಾಹಿತ್ಯ ಸಂಸ್ಕøತಿಯನ್ನು ಹೊಸ ದೃಷ್ಠಿಯಿಂದ ಶೋಧಿಸುವ ಅಗತ್ಯವಿದೆ. ತುಳು ಸಾಹಿತ್ಯದಲ್ಲಿ ಸಂಸ್ಕøತಿಯ ವೈಭವೀಕರಣವಿದಯೇ ಹೊರತು ಅಧ್ಯಯನದ ಗುಣವಿಲ್ಲ. ತುಳುನಾಡಿನ ಭೌತಿಕ ವಸ್ತುಗಳ ಸುತ್ತ ಸಾಮಾಜಿಕ ಸಾಂಸ್ಕøತಿಕ ಅಧ್ಯಯನಕ್ಕೆ ಅವಕಾಶವಿದೆ. ತುಳುವಿನ ಕುರಿತು ಸ್ಥೂಲ ಅಧ್ಯಯನಕ್ಕಿಂತ ಸೂಕ್ಷ್ಮ ಅಧ್ಯಯನ ಇಂದಿನ ಅಗತ್ಯ ಎಂದರು.

ತುಳುನಾಡು ಬಹುತ್ವದ ನೆಲೆಯಿಂದ ಕೂಡಿದೆ. ಹಲವಾರು ವರ್ಷಗಳ ಇತಿಹಾಸ ಈ ಭಾಷೆಗೆ ಇದೆ. ಆದರೆ ಇಂದು ಈ ಭಾಷೆಗೆ ಪ್ರಾದೇಶಿಕ ರಾಜಕೀಯ ನೆಲೆಗಟ್ಟಿಲ್ಲ ಅನ್ನೋದೆ ಶೋಚನೀಯ. ತುಳುವರಲ್ಲಿ ನೋಡುವ ಹಾಗೂ ಕೇಳುವ ಗುಣವಿದೆಯೋ ಹೊರತು ಲಿಖಿತವಾಗಿ ಬರೆಯುವ ಗುಣವಿಲ್ಲ. ವಿದ್ಯಾರ್ಥಿಗಳಾದ ನೀವು ತುಳುವಿನ ಬಗ್ಗೆ ಅಭಿಮಾನ ಬೆಳಸಿಕೊಳ್ಳಿಯೇ ಹೊರತು ಕೀಳರಿಮೆ ಬೇಡ. ತುಳುವರು ಅನ್ನೋ ಭಾವನೆ ನಿಮ್ಮಲ್ಲಿ ಬೆಳೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಉಪನ್ಯಾಸಕ ಹಾಗೂ ತುಳು ಸಂಸ್ಕøತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಯೋಗಿಶ್ ಕೈರೋಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಜ್ಞಾ ಸ್ವಾಗತಿಸಿದರು. ಸುರಕ್ಷಾ ವಂದಿಸಿದರು.
