ಬಂಟ್ವಾಳ : ಭಾರತೀಯ ಜೀವ ವಿಮಾ ನಿಗಮವು ಸುದೀರ್ಘ 62ನೇ ಹುಟ್ಟು ಹಬ್ಬದ ಪ್ರಯುಕ್ತ ವಿಮಾ ಸಪ್ತಾಹದ ಕಾರ್ಯಕ್ರಮ ದ ಉದ್ಘಾಟನೆಯನ್ನು ಬಿ.ಸಿ.ರೋಡ್ನ ಶಾಖೆಯಲ್ಲಿ ಪ್ರಥಮ ಗ್ರಾಹಕ ಬಾಬು ಕಕ್ಕೆಪದವು ನೆರವೇರಿಸಿದರು.

ಹಿರಿಯ ಶಾಖಾಧಿಕಾರಿ ಪ್ರೇಮ್ ನಾಥ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ಸುದೀರ್ಘ 62ವರ್ಷಗಳನ್ನು ಪೂರೈಸಿದೆ. ವಿಮಾ ರಕ್ಷೆಯನ್ನು ಮನೆಮನೆಯಲ್ಲಿ ಬೆಳಗಿಸುವ ಮಹೋನ್ನತ ಧ್ಯೇಯದೊಂದಿಗೆ 1956 ಸೆ.9ರಂದು ಉದಯಿಸಿ 8ವಲಯ, 113ವಿಭಾಗ, 2048ಶಾಖೆ , 1430ಉಪಗ್ರಹ ಶಾಖೆ, 1237ಮಿನಿ ಆಫೀಸ್, 1.12ಲಕ್ಷ ಉದ್ಯೋಗಿಗಳು ಹಾಗೂ 11.49ಲಕ್ಷ ಸಮರ್ಥ ಪ್ರತಿನಿದ್ಥಿu್ಪಳ ಬೃಹತ್ ಜಾಲದೊಂದಿಗೆ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳಾದ ಬಿ.ಎಸ್.ನಾಯಕ್, ಹರಿಶ್ಚಂದ್ರ ಭಟ್, ರಾಮಯ್ಯ ಶೆಟ್ಟಿ, ಅಭಿವೃದ್ಧಿ ಅಧಿಕಾರಿಗಳಾದ ಗೋಕುಲ್ ಶೇಟ್, ಮಧ್ವರಾಜ್ ಕಲ್ಮಾಡಿ, ದಿನೇಶ್ ಮಾಮೇಶ್ವರ, ಸತೀಶ್ ಕುಮಾರ್, ಆಡಳಿತಾಧಿಕಾರಿಗಳಾದ ಮೋಹನ್.ಪಿ , ರಮಾನಂದ ಭಟ್ ಹಾಗೂ ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಂದ್ರೇಶ್ ಸ್ವಾಗತಿಸಿದರು. ಜಯರಾಮ್ ನೆಲ್ಲಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಉಪಶಾಖಾಧಿಕಾರಿ ಸುಂದರ್ ಮೇರಾ ವಂದಿಸಿದರು.
