ಬಂಟ್ವಾಳ : ಸಜಿಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ(ನಿ) ಸಜಿಪಮೂಡ ಇದರ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ಆ.26 ಆದಿತ್ಯವಾರದಂದು ನಡೆಯಿತು.

mahasabhe
2017-18ನೇ ಸಾಲಿನಲ್ಲಿ ಸಂಘವು ಸುಮಾರು 13.50.00.000(ಹದಿಮೂರು ಕೋಟಿ ಐವತ್ತು ಲಕ್ಷ)ವ್ಯವಹಾರ ನಡೆಸಿದ್ದು ರೂ.11,37,449.14 ನಿವ್ವಳ ಲಾಭ ಗಳಿಸಿರುತ್ತದೆ. ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ 25% ಡಿವಿಡೆಂಡ್ ನೀಡುವುದೆಂದು ಘೋಷಿಸಿದರು. ಸಂಘದ ಕಾರ್ಯವ್ಯಾಪ್ತಿಯಾದ ಬೋಳಂತೂರು ಮತ್ತು ಚೇಳೂರಿನಲ್ಲಿ ಸಂಘದ ಹೊಸ ಶಾಖೆಯನ್ನು ತೆರೆಯುವ ಯೋಜನೆಯನ್ನು ಹೊಂದಿದ್ದು ಮುಂದಿನ ಮಹಾಸಭೆಯಲ್ಲಿ ಇಬ್ಬರು ಹಿರಿಯ ಮೂರ್ತೆದಾರರನ್ನು ಗೌರವಿಸಿ ಸನ್ಮಾನಿಸುವ ಬಗ್ಗೆ ಪ್ರಸ್ತಾಪಿಸಿದರು ಹಾಗೂ ಕ್ಲಪ್ತ ಸಮಯದಲ್ಲಿ ಸಾಲ ಸಂದಾಯ ಮಾಡುವ ಸದಸ್ಯರನ್ನು ಸನ್ಮಾನಿಸುವ ಯೋಜನೆ ಹೊಂದಿರುವುದಾಗಿ ಪ್ರಸ್ತಾಪಿಸಿದರು.
ಸುಮಾರು 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಸ್ವ-ಸಹಾಯ ಸಂಘಗಳ ಮುಖಾಂತರ ಸದಸ್ಯರಿಗೆ ಸಂಘದ ಮುಖಾಂತರ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಹೊಂದಿರುವುದಾಗಿ ಪ್ರಸ್ತಾಪಿಸಿದರು. ಅತಿಥಿಗಳಾದ ಚಂದು ನಾೈಕ್ , ರತ್ನಾಕರ ಪೂಜಾರಿ ನಾಡಾರು ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಕೋರಿ ಸಂಘಕ್ಕೆ ಶುಭ ಹಾರೈಸಿದರು.
ಈ ಸಭೆಯಲ್ಲಿ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರುಗ ಳಾದ ಟಿ.ಮುತ್ತಪ್ಪ ಪೂಜಾರಿ ಕೊಲ್ಯ, ವಿಠಲ ಬೆಳ್ಚಾಡ ಚೇಳೂರು, ಶೀನ ಬೆಳ್ಚಾಡ ಚೇಳೂರು, ಅಶೋಕ ಕೋಮಾಲಿ, ಕೆ.ಸುಜಾತ.ಎಮ್.ನಗ್ರಿ , ವಾಣಿ ವಸಂತ್ ನಗ್ರಿ , ಸ.ಮೂ.ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಪ್ರಗತಿಪರ ಕೃಷಿಕ ಅಣ್ಣು ನಾೈಕ್ ನಗ್ರಿ , ಗುರು ಕ್ರೆಡಿಟ್ ಕೋ.ಓಪರೇಟಿವ್ (ನಿ)ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಮೂರ್ತೆದಾರರ ಮಹಾಮಂಡಲದ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಮತಾ.ಜಿ ವರದಿ ಮಂಡಿಸಿದರು. ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸದರು. ವಾಸುದೇವ ಪೂಜಾರಿ ಪೆರ್ವ ವಂದಿಸಿದರು.

By suddi9

Leave a Reply

Your email address will not be published. Required fields are marked *