ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪುತ್ತೂರು ಜಿಲ್ಲೆ ಪಾಣೆಮಂಗಳೂರು ಮಂಡಲದ ಶೇಡಿಗುರಿ ಶಾಖೆಯಲ್ಲಿ ಅದಿತ್ಯವಾರ ಬೆಳಿಗ್ಗೆ ರಕ್ಷಾ ಬಂಧನ ಉತ್ಸವ ನಡೆಯಿತು .

bantwala-raksha bandana (1)

ಈ ಸಂದರ್ಭದಲ್ಲಿ ಸಂಘದ ಸ್ಚಯಂ ಸೇವಕ ಸುರೇಶ್ ಕುಲಾಲ್ , ಬೌದ್ಧಿಕ್ ಮಾಡಿ ಜಾತಿ, ಮತ ,ಪಂಥ, ಪ್ರಾಂತ, ವರ್ಗ ,ವರ್ಣವನ್ನು ಮೀರಿ ಬದುಕುವುದೇ ಸಂಘ ಕಲಿಸಿದ ಶಿಕ್ಷಣ .ಸಂಘದ ಶಿಕ್ಷಕ ಒಬ್ಬ ಸೈನಿಕರಿದ್ದಂತೆ. ಎಂತಹ ಸಂದರ್ಭದಲ್ಲೂ ದೇಶ ಸೇವೆಗೆ, ಸಮಾಜ ಸೇವೆಗೆ ಬದ್ದ, ಯಾವುದೇ ಎಡರುತೊಡರು ಬಂದರೂ ಅವನು ಹಿಂಜರಿಯುದೇ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಟ ಮಾಡುತ್ತಾನೆ.

bantwala-raksha bandana (2)

ರಕ್ಷಾ ಬಂಧನ ಆಚರಿಸುವ ಮೂಲಕ ಸಹೋದರತೆಯನ್ನು, ಸಮಾನತೆಯನ್ನು, ಬಂಧುತ್ವವನ್ನು ,ಹಿಂದುತ್ವವನ್ನು, ನಾವು ಸಮಾಜಕ್ಕೆ ಸಾರುತ್ತಿದ್ದೇವೆ .ಭಾರತ ವಿಶ್ವ ಗುರುವಾಗಬೇಕು ಎಂದು ಹಿರಿಯವರ ಕನಸು , ನನಸು ಮಾಡಲು ಯುವಕರ ಮನಸ್ಸು ಒಂದಾಗಬೇಕು ಎಂದು ಅವರು ಹೇಳಿದರು. ಇದೇ ಸಂಧರ್ಭದಲ್ಲಿ ಎಲ್ಲರಿಗೂ ರಕ್ಷಾ ಬಂಧನದ ಶುಭ ಹಾರೈಕೆ ಮಾಡಿದರು .ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಕಾರ್ಯಕ್ರಮ ನಿರೂಪಿಸಿದರು .

By suddi9

Leave a Reply

Your email address will not be published. Required fields are marked *