ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಡಿಜಿಟಲೈಸೇಶನ್ ಹಾಗೂ ಸ್ಟಾರ್ಟ್ಅಪ್ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಶುಕ್ರವಾರದಂದು ಪುಟ್ಟಣ್ಣಕಣಗಾಲ್ ವೇದಿಕೆಯಲ್ಲಿ ನಡೆಯಿತು.

ಒಲ್ಪಾ ನ್ಯೂಸ್ ವೆಬ್ಸೈಟ್ನ ಸಂಸ್ಥಾಪಕ ಕಿರಣ್ ಶೆಣೈ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಈಗಿನ ದಿನಗಳಲ್ಲಿ ಮಾಧ್ಯಮವು ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಸಂಪೂರ್ಣ ಡಿಜಿಟಲೈಸೇಶನ್ ಆಗಿ ಮಾರ್ಪಾಡಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳನ್ನು ಡಿಜಿಟಲ್ ಮಾಧ್ಯಮ ಮತ್ತು ಪತ್ರಿಕೆಗಳು ವಿಷಯದಂತೆ ಎರಡು ಗುಂಪುಗಳನ್ನಾಗಿ ವಿಗಂಡಿಸಿ, ಈಗಿನ ಕಾಲದಲ್ಲಿ ಇವೆರಡೂ ಮಾಧ್ಯಮಗಳು ಹೇಗೆ ತನ್ನ ಮಹತ್ವದ ಕಾರ್ಯನಿರ್ವಹಿಸುತ್ತಿವೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಆಯಾ ಗುಂಪಿನ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು. ಮಾಧ್ಯಮವೆಂದರೇನು, ಉದ್ದೇಶ, ಪ್ರಸ್ತುತವಾಗಿ ಮಾಧ್ಯಮದ ಅನುಕೂಲ-ಅನಾನುಕೂಲಗಳು ಹಾಗೂ ಮಾಧ್ಯಮದ ಮೂಲ ತತ್ವಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ರೇಷ್ಮಾ ಉಪಸ್ಥಿತರಿದ್ದರು.
