ಮೂಡುಬಿದಿರೆ: ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸಿಕೊಂಡು ನಕಾರಾತ್ಮಕ ಚಿಂತನೆಗಳನ್ನು ನಿರ್ಲಕ್ಷಿಸಬೇಕು. ಸಂತೋಷಮಯ ಬದುಕು ಮುಖ್ಯ ಗುರಿಯಾಗಿರಬೇಕು ಎಂದು ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಜೈಕಿಶನ್ ಭಟ್ ಹೇಳಿದರು.

ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಿದ `ಮಿಷನ್ ಇಂಪಾಸಿಬಲ್ ಟು ಪಾಸಿಬಲ್’ ಕಾರ್ಯಾಗಾರದಲ್ಲಿ ಮಾತಾಡಿದರು. ಕಲಿಯುಗದಲ್ಲಿ ಮಾಹಿತಿ ತಂತ್ರಜ್ಞಾನ, ಸಂವಹನ, ಮನರಂಜನೆಗಳು ತುಂಬಾ ಪ್ರಾಮುಖ್ಯತೆ ಹೊಂದಿದೆ. ಮಾನವ ಸತ್ತರೂ ಆತನ ಸಾಧನೆಗಳು ಜನರ ನೆನಪಿನಲ್ಲಿ ಉಳಿಯುವಂತಿರಬೇಕು. ಜೀವನದಲ್ಲಿ ಯಶಸ್ಸಿನ ಮಂತ್ರವನ್ನು ಹೊಂದಿರಬೇಕು ಎಂದರು.

ವಾಣಿಜ್ಯ ವಿಭಾಗದ ಡೀನ್ ಉಮೇಶ್ ಶೆಟ್ಟಿ ಮಾತನಾಡಿ, ಬದಲಾವಣೆ ಒಂದು ದಿನದ ಕಾರ್ಯಗಾರದಿಂದ ಸಾಧ್ಯವಿಲ್ಲ, ಈ ಕಾರ್ಯಕ್ರಮದಿಂದ ಕಲಿತ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವುದರಿಂದ ಯಶಸ್ಸು ಸಾಧ್ಯ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಉಮೇಶ್ ಶೆಟ್ಟಿ, ವಿಭಾಗ ಮುಖ್ಯಸ್ಥ ರಾಮಕೃಷ್ಣ ಶೆಟ್ಟಿ, ಕಾರ್ಯಕ್ರಮ ನಿರ್ವಾಹಕಿ ಅಪರ್ಣಾ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನುಷಾ ಐತಾಳ್ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿ, ಸಿಂಧು ಹೆಗ್ಡೆ ನಿರೂಪಿಸಿದರು.
