ಮೂಡುಬಿದಿರೆ: ವಿಶ್ವ ಹಿರಿಯನಾಗರಿಕರ ದಿನದ ಪ್ರಯುಕ್ತ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಮೌಂಟ್ ರೋಜರಿ ಆಸ್ಪತ್ರೆ ಹಾಗೂ ಟಿ. ಬಿ. ಸ್ಯಾನಿಟೋರಿಯಮ್ ಆಲಂಗಾರು ಸಹಯೋಗದೊಂದಿಗೆ ಅಲಂಗಾರಿನಲ್ಲಿ ಆಚರಿಸಲಾಯಿತು.

alvas BNYS
ಕಾಲೇಜಿನ ವಿದ್ಯಾರ್ಥಿಗಳಿಂದ ಹಿರಿಯ ನಾಗರಿಕರಿಗೆ ವಿವಿಧ ಮನೋರಂಜನಾ ಕಾರ್ಯಕ್ರಮ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು. ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ನಗು ಚಿಕಿತ್ಸೆಯ ಬಗ್ಗೆ ಡಾ. ದೀಪಕ್ ಮಾಹಿತಿ ನೀಡಿದರು.
ಆಸ್ಪತ್ರೆ ವ್ಯವಸ್ಥಾಪಕಿ ಮದರ್ ಪ್ರೆಸ್ಸಿಲ್ಲಾ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *