ವಿಟ್ಲ: ಶ್ರೀ ಭಗವತೀ ದೇವಸ್ಥಾನದದಲ್ಲಿ ನಡೆಯುವ ಸಂಹಮಾಸದ ಪೂಜೆಯ ಪ್ರಯುಕ್ತ ಯಕ್ಷ ಸಿಂಧೂರ ಪ್ರತಿಷ್ಠಾನದ ವತಿಯಿಂದ `ಶ್ರೀರಾಮ ನಿರ್ಯಾಣ’ ಎಂಬ ಯಕ್ಷಗಾನ ತಾಳ ಮದ್ದಳೆ ಮತ್ತು ಕಲಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಯಕ್ಷಗಾನದ ಭಾಗವತರಾಗಿ ಪ್ರಭಾ ಭಟ್ ಚಣಿಲ, ಅಭಿಷೇಕ್ ಚೆಣಿಲ ಮತ್ತು ಅವಿನಾಶ್ ಚೆಣಿಲ ಹಿಮ್ಮೇಳ ವಾದಕರಾಗಿ ಭಾಗವಹಿಸಿದ್ದರು.

ಅರ್ಥಧಾರಿಗಳಾಗಿ ಪಕಳಕುಂಜ ಶ್ಯಾಮ ಭಟ್, ಚಣಿಲ ಸುಬ್ರಹ್ಮಣ್ಯ ಭಟ್, ಶ್ರೀಧರ ವನಭೋಜನ, ಪ್ರಶಾಂತ ಕುಮಾರ್ ಮತು ಎಲ್ ಎನ್ ಭಟ್ ಮಳಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪುತ್ತೂರು ಸಂಪ್ಯ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ದೇವಳದಲ್ಲಿ ಕಾಣಿಯೂರು ಶ್ರೀಗಳ ಚಾತುರ್ಮಾಸ್ಯದಲ್ಲಿ ನಡೆದ ತಾಳಮದ್ದಳೆ ಸ್ಪರ್ಧೆಯಲ್ಲಿ ಯಕ್ಷಸಿಂಧೂರ ತಂಡದಿಂದ ಭಾಗವಹಿಸಿ ವೈಯಕ್ತಿಕ ಬಹುಮಾನ ಪಡೆದ ಪ್ರಶಾಂತ ಕುಮಾರ್ ಅವರನ್ನು ಪುರಸ್ಕರಿಸಲಾಯಿತು.
ಭಗವತಿ ದೇವಸ್ಥಾನದ ಮೊಕ್ತೇಸರ ಕೇಶವ ಆರ್ ವಿ, ದಿನಕರ ಭಟ್ ಮಾವೆ, ಯಕ್ಷಸಿಂಧೂರದ ಸಂಚಾಲಕ ಚಣಿಲ ಸುಬ್ರಹ್ಮಣ್ಯ ಭಟ್, ಶ್ಯಾಮ ಭಟ್ ಪಕಳಕುಂಜ ವೇದಿಕೆಯಲ್ಲಿದ್ದರು. ಶ್ರೀಧರ ವನಭೋಜನ ಕಾರ್ಯಕ್ರಮ ನಿರ್ವಹಿಸಿದರು.
