ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿಲ್ಲವ ಮಹಿಳಾ ಸಮಿತಿ ಗಾಣದಪಡ್ಪು ಇವರ ಆಶ್ರಯ ದಲ್ಲಿ ಅ.24 ರಂದು ಶುಕ್ರವಾರ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ದ ಬಳಿಯಿರುವ ಸಭಾಭವನ ದಲ್ಲಿ ಬೆಳಿಗ್ಗೆ 9 ರಿಂದ ಲೋಕೇಶ್ ಶಾಂತಿ ಇವರ ಪೌರೋಹಿತ್ಯ ದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಮೀ ವ್ರತ ನಡೆಯಿತು.
ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷ ಸೇಸಪ್ಪ ಕೋಟ್ಯಾನ್, ಸಂಘದ ಪದಾಧಿಕಾರಿಗಳು ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಅದ್ಯಕ್ಷೆ ಜಯಲಕ್ಷ್ಮಿ ಭುವನೇಶ್, ಕಾರ್ಯದರ್ಶಿ ಚಂದ್ರಾವತಿ ಕುಶಲ್ ರಾಜ್, ಕೋಶಾದಿಕಾರಿ ರೇವತಿ ರತ್ನಾಕರ್, ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.
