ಮೂಡುಬಿದಿರೆ: ಜೀವನದಲ್ಲಿ ಉನ್ನತ ಸ್ಥಾನ ಪಡೆಯುವುದು ಮುಖ್ಯ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ತರಬೇತಿ ಪಡೆಯಬೇಕೇ ಹೊರತು ಪೋಷಕರ ಒತ್ತಾಯಕ್ಕಾಗಿ ಕಲಿಯಬಾರದು. ತರಬೇತಿ ಕೇಂದ್ರಗಳು ಕೇವಲ ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿಸುವಲ್ಲಿ ಮಾತ್ರ ಯೋಗ್ಯವಾಗಿದೆ. ಅದಕ್ಕಿಂತ ಸ್ವಪ್ರಯತ್ನದಿಂದ ವಿದ್ಯಾರ್ಥಿಗಳು ತಯಾರಾಗುವುದು ಉತ್ತಮ ಮಾರ್ಗ ಎಂದು ಐಐಐಟಿ ನಿರ್ದೇಶಕರಾದ ಡಾ.ಪಿ. ನಾಗಭೂಷಣ್ ಹೇಳಿದರು.

rostrum (2)
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಅಡಿಟೋರಿಯಂನಲ್ಲಿ ಗುರುವಾರ ನಡೆಯಿತು.
ಸಮಸ್ಯೆ ಎಂಬುದು ಪ್ರತಿಯೊಂದು ವೃತ್ತಿ ಕ್ಷೇತ್ರದಲ್ಲಿ ಇರುವುದು ಸಾಮಾನ್ಯ. ಅದನ್ನು ಕಿತ್ತುಹಾಕಿ ಮುಂದೆ ಸಾಗದಿದ್ದರೆ ಅದು ಇನ್ನಷ್ಟು ಬಿಗಡಾಯಿಸಿಕೊಂಡು ಹೋಗುತ್ತದೆ. ಕಲಿಕೆಯ ನಂತರ ವಿದ್ಯಾರ್ಥಿಗಳು ಬೇರೆ ಬೇರೆ ಕಂಪೆನಿಗಳ ಮೊರೆ ಹೋಗುವುದಕ್ಕಿಂತ ಪ್ರತಿಷ್ಠಿತ ಕಂಪೆನಿಗಳು ಸ್ವತಃ ತಾವೇ ಮುಂದೆ ಬಂದು ಯೋಗ್ಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತಹ ಬೆಳವಣಿಗೆ ಆಗಬೆಕಾಗಿದೆ. ಪ್ರತಿಯೊಂದು ಕೆಲಸಕ್ಕೂ ಉತ್ತಮ ಪ್ರತಿಭಾನ್ವಿತ ವ್ಯಕ್ತಿ ಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡಬೇಕು. ಎಲ್ಲಾ ಕಾಲೇಜುಗಳಲ್ಲಿ ಇಂಜಿನಿಯರ್‍ಗಳನ್ನು ತಯಾರು ಮಾಡುತ್ತಿದ್ದಾರೆ ಹೊರತು ಸಕಲ ಕೌಶಲ್ಯಗಳಿಂದ ಸಿದ್ದಗೊಳಿಸುತ್ತಿಲ್ಲ. ಆದರೆ ಆಳ್ವಾಸ್ ಕಾಲೇಜ್‍ನ ಇಂಜಿನಿಯರ್ ವಿದ್ಯಾರ್ಥಿಗಳು ಇದಕ್ಕೆ ಹೊರತಾಗಿದ್ದಾರೆ ಎಂದು ತಿಳಿಸಿದರು.
ನಮಗೆ ತಿಳಿಯದಂತೆಯೇ ನಾವು ದಿನನಿತ್ಯ ಅದೆಷ್ಟೋ ಚಟುವಟಿಕೆಯಲ್ಲಿ ತಲ್ಲಿನರಾಗುತ್ತೇವೆ. ಹಾಗೇಯೇ ಓದುವುದು ಕೂಡ ಅದರ ಒಂದು ಭಾಗವಾಗಬೇಕು. ನಿರಂತರ ಕಲಿಕೆಯಿಂದ ಹಳೆ ಪ್ರಶ್ನೆ ಪತ್ರಿಕೆಯನ್ನು ಅವಲಂಬಿಸುವ ಅಗತ್ಯ ಇರುವುದಿಲ್ಲ. ಕಳೆದು ಹೋದ ಸಮಯಕ್ಕೆ ಚಿಂತಿಸದೆ ಈಗ ಇರುವಂತಹ ಸಮಯವನ್ನು ಉಪಯೋಗಿಸಬೇಕು. ಆಗ ಜೀವನಕ್ಕೊಂದು ಅರ್ಥ ಇರುತ್ತದೆ ಎಂದು ಹೇಳಿದರು.
ಬಳಿಕ ವಿದ್ಯಾರ್ಥಿಗಳೋಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

rostrum (1)

 

ಐಐಐಟಿ ಅಲಹಬಾದ್ ಮತ್ತು ಆಳ್ವಾಸ್ ಕಾಲೇಜಿನ ನಡುವಿನ ಒಡಂಬಡಿಕೆ
ಐಐಐಟಿ ಅಲಹಬಾದ್ ಮತ್ತು ಆಳ್ವಾಸ್ ಕಾಲೇಜಿನ ನಡುವಿನ ಒಡಂಬಡಿಕೆಯ ವಿನಿಮಯವು ಆಳ್ವಾಸ್ ಕಾಲೇಜಿನ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಮತ್ತು ಐಐಐಟಿ ಅಲಹಾಬಾದ್‍ನ ನಿರ್ದೇಶಕರಾದ ಡಾ. ಪಿ ನಾಗಭೂಷಣ್ ನಡುವೆ ಆಳ್ವಾಸ್ ಪ್ರತಿಷ್ಠಾನದ ಪ್ರದಾನ ಕಚೇರಿಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ವಿವಿಧ ಇಂಜಿನಿಯರ್ ವಿಭಾಗಗಳ ಮುಖ್ಯಸ್ಥರು ಮತ್ತು ಡಾ. ಪಿ ನಾಗಭೂಷಣ್ ರವರ ಪತ್ನಿ ಲಕ್ಷ್ಮಿ ನಾಗಭೂಷಣ್ ಉಪಸ್ಥಿತರಿದ್ದರು.
ಈ ಒಡಂಬಡಿಕೆಯ ಮೊದಲ ಹಂತವಾಗಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರ ಒಂದು ತಂಡ ಸದ್ಯದಲ್ಲೆ ಐಐಐಟಿ ಅಲಹಬಾದ್‍ಗೆ ಅದ್ಯಯನದ ಹಿನ್ನಲೆಯಲ್ಲಿ ತೆರಳಲಿದ್ದು, ನಂತರ ದಿನಗಳಲ್ಲಿ ಅಲ್ಲಿನ ನುರಿತ ಆರು ಜನ ಉಪನ್ಯಾಸಕರ ತಂಡ ಮೂಡಬಿದಿರೆಗೆ ಆಗಮಿಸಿ ಕಾಲೇಜಿನ ಉಪನ್ಯಾಸಕರಿಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಲಿದ್ದಾರೆ.

By suddi9

Leave a Reply

Your email address will not be published. Required fields are marked *