ಮಂಗಳೂರು: ಜನುಮಾಂತರದ ಕರ್ಮದುರಿತಗಳನ್ನು ಕಳೆದುಕೊಳ್ಳಲೆಂದು ಹುಟ್ಟುವ ನಾವು, ಮತ್ತೆ ಮತ್ತೆ ಕರ್ಮದುರಿತಗಳನ್ನೇ ಮಾಡಿ ಕರ್ಮಬಂಧನಕ್ಕೆ ಒಳಗಾಗುತ್ತಿದ್ದೇವೆ. ಇಂದ್ರಿಯ ಭಾವಗಳಿಗೆ ಹೆಚ್ಚು ಸ್ಪಂದಿಸದೆ, ಅಂತರಾಳದ ದನಿ ಅರಿತು ನಡೆದಾಗ ಮನುಷ್ಯಜನ್ಮ ಸಾರ್ಥಕಎಂದು ಮರಕಡದಶ್ರೀ ಶ್ರೀನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಯವರು ಹೇಳಿದರು.

ರಾಮಾಯಣ ಮಾಸಾಚರಣೆ ಸಮಿತಿ ವತಿಯಿಂದ ಆ.17 ಶುಕ್ರವಾರ, ಕರ್ಕಾಟಕ ಸಂಕ್ರಮಣದಿಂದ ಸಿಂಹ ಸಂಕ್ರಮಣದವರೆಗೆ ಜರಗಿದ 34 ದಿನಗಳ ರಾಮಾಯಣ ಹರಿಕಥಾ ಸತ್ಸಂಗದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಸತೀಶ್ರಾವ್ ಮಾತನಾಡಿ, ಈಗಿನ ಸುಶಿಕ್ಷಿತ ಯುವಪೀಳಿಗೆ ಸನಾತನ ಸಂಸ್ಕøತಿಯ ಬಗೆಗೆ ಅರಿವು ಮೂಡಿಸಿಕೊಳ್ಳದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ,.ಅಳಿದ ಹಲವು ಸಂಸ್ಕøತಿಗಳ ಮಧ್ಯೆ, ಉಳಿದ ಭಾರತೀಯ ಸಂಸ್ಕøತಿಯು ಲೋಕದ ಉಳಿವಿಗೆ ಅಗತ್ಯ. ಈ ನಿಟ್ಟಿನಲ್ಲಿ ಇದರಲ್ಲಿ ತೊಡಗಿಸಿಕೊಂಡಿರುವ ಹರಿದಾಸ ಪುಂಡರೀಕಾಕ್ಷ ಬೆಳ್ಳೂರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವ ಉಪಸ್ಥಿತರಾದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ.ಎಂ. ಬಿ. ಪುರಾಣಿಕ್ರಾಮ-ಕೃಷ್ಣರಜೀವನಅಖಂಡ ಭಾರತದ ಭಾವೈಕ್ಯತೆಗೆ ಕಾರಣವಾಗಿದ್ದ ಬಗ್ಗೆ ಮಾತನಾಡಿ, ಭಗವಂತನ ರಾಮಾವತಾರದ ಕಥಾಸರಣಿಯನ್ನು, ವಿವಿಧ ಊರುಗಳಲ್ಲಿ ಹರಿಕಥಾ ಸತ್ಸಂಗದ ಮೂಲಕ ನಡೆಸಿದ, ಪುಂಡರೀಕಾಕ್ಷ ಬೆಳ್ಳೂರರ ಕಾರ್ಯದ ಬಗ್ಗೆ ಅಭಿನಂದಿಸಿದರು.
ರಾಮಾಯಣ ಮಾಸಾಚರಣೆ ಸಮಿತಿಯಗೌರವಾಧ್ಯಕ್ಷರಾದರವೀಂದ್ರ ಶೆಟ್ಟಿ ಉಳಿದೊಟ್ಟು ರಾಮಾಯಣ ಮಾಸಾಚರಣೆಯ ಸಂಕ್ಷಿಪ್ತ ವಿವರಣೆ ನೀಡಿದರು. ಎಲ್ಲಾ ಕಡೆಗಳಲ್ಲಿ ದೊರಕಿದಂತಹ ಅದ್ಭುತ ಸ್ಪಂದನೆಯನ್ನು ಸ್ಮರಿಸಿದರು. ಒಂದು ಮಾಸ ಪರ್ಯಂತ ಹರಿಕಥಾ ಸತ್ಸಂಗ ಸರಣಿ ನಡೆಸಿದ ಶ್ರೀ ಪುಂಡರೀಕಾಕ್ಷ ಬೆಳ್ಳೂರು ತಮ್ಮ ಅನಿಸಿಕೆ-ಅನುಭವವನ್ನು ಹಂಚಿಕೊಂಡು ತಮ್ಮ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸುವುದರೊಂದಿಗೆ ಒಂದು ತಿಂಗಳ ಕಾಲ ತಮ್ಮ ಜೊತೆ ಸಹಕರಿಸಿದ ಸಹಕಲಾವಿದರನ್ನು ಗೌರವಿಸಿದರು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಈ ಸರಣಿಯ ಕೊನೆಯ ಆಖ್ಯಾನ “ಶ್ರೀ ರಾಮ ನಿರ್ಯಾಣ” ವನ್ನು ಹರಿದಾಸ ಶ್ರೀ ಪುಂಡರೀಕಾಕ್ಷ ಬೆಳ್ಳೂರು ನಿರ್ವಹಿಸಿದರು.
ಮಾಸಾಚರಣಾ ಸಮಿತಿಅಧ್ಯಕ್ಷರಾದ ಹರಿದಾಸ್ ಮಾಡೂರು ಉಪಸ್ಥಿತರಿದ್ದರು. ರವಿ ಹೆಜಮಾಡಿ ಸ್ವಾಗತಿಸಿದರು. ರವಿ ಅಸೈಗೋಳಿ ವಂದಿಸಿದರು.

