ಉಡುಪಿ: ಉಡುಪಿ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್, ಉಡುಪಿ ಜಿಲ್ಲಾ ವೈದ್ಯಕೀಯ ಪ್ರತಿನಿಧಿಗಳ ಸಂಘ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ಸಹಭಾಗಿತ್ವದಲ್ಲಿ ಕೇರಳ ಮತ್ತು ಕೊಡಗು ಮಹಾ ಮಳೆಗೆ ಹಾನಿಯಾಗಿರುವ ಪ್ರದೇಶಗಳಿಗೆ ಸಹಾಯಕವಾಗುವ ದೃಷ್ಟಿಯಿಂದ ಸುಮಾರು 3 ಲಕ್ಷ ರೂ ಬೆಲೆ ಬಾಳುವ ವಿವಿಧ ಔಷಧ ಮತ್ತು ಆಹಾರ ಸಾಮಾಗ್ರಿಗಳನ್ನು ಆ.20 ರಂದು ಉಡುಪಿ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರ ಮೂಲಕ ಕಳುಹಿಸಿಕೊಡಲಾಯಿತು.

kerala flood-medicine
ಈ ಸಂದರ್ಭದಲ್ಲಿ ಸಹಾಯಕ ಔಷಧ ನಿಯಂತ್ರಕರಾದ ಕೆ.ವಿ ನಾಗರಾಜ್, ಸಾಯಿರಾಧ ಫಾರ್ಮಾದ ಮುಖ್ಯಸ್ಥರಾದ ಮನೋಹರ್ ಶೆಟ್ಟಿ, ಐಡಿಯಲ್ ಫಾರ್ಮಾದ ಮುಖ್ಯಸ್ಥ ಮತ್ತು ಲಯನ್ಸ್ ದ್ವಿತಿಯ ಜಿಲ್ಲಾ ಗವರ್ನರ್ ವಿಜೆ ಶೆಟ್ಟಿ, ಸುವರ್ಣ ಎಂಟರ್‍ಪ್ರೈಸಸ್‍ನ ಮಧುಸೂಧನ್ ಹೇರೂರು, ಗಿರಿಜಾ ಎಂಟರ್‍ಪ್ರೈಸಸ್‍ನ ರವೀಂದ್ರ ಶೆಟ್ಟಿ, ಸ್ವಸ್ಥಿಕ್ ಫಾರ್ಮಾದ ಸುಬ್ರಮಣ್ಯ ಭಟ್,ಕೆಮಿಸ್ಟ್ ಎಸೋಸಿಯೇಷನ್ ಕಾರ್ಯದರ್ಶಿ ರಿಚಾರ್ಡ,ಗೌತಮ್ ಎಂಟರ್‍ಪ್ರೈಸಸ್ ನ ರಮೇಶ್ ನಾಯಕ್,ಎವರೆಸ್ಟ ಎಂಟರ್‍ಪ್ರೈಸಸ್ ರವೀಂದ್ರ ಮಲ್ಯ, ಪದ್ಮಾಕರ್ ನಾಯಕ್, ಮೆಡಿಕಲ್ ಎಂಪೋರಿಯಂನ ರಮೇಶ್, ಜಯಂಟ್ಸ್ ಕಾರ್ಯದರ್ಶಿ ಸುಂದರ ಪೂಜಾರಿ, ವೈದ್ಯಕೀಯ ಪ್ರತಿನಿಧಿ ಸಂಘದ ಅದ್ಯಕ್ಷ ಅಣ್ಣಯ್ಯದಾಸ್, ಶ್ರೀನಾಥ್ ಕೋಟ, ಸುಬ್ರಮಣ್ಯ ಆಚಾರ್ಯ, ರಾಘವೇಂದ್ರ ಪ್ರಭು ಅರ್.ಅರ್ ಎಂಟರ್‍ಪ್ರೈಸಸ್ ಮತ್ತು ಪ್ರೈಮಲ್, ಫಾರ್ಮಾ ಡಿಸ್ಟಿಬ್ಯೂಟರ್ ಮುಖ್ಯಸ್ಥರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *