ಕೈಕಂಬ: ಕುಪ್ಪೆಪದವು ರಿಕ್ಷಾ ಚಾಲಕ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಲೆಂದು ತೆರಳಿದ ಸಂದರ್ಭ ನಾಲ್ಕು ಜನರ ತಂಡವೊಂದು ತನ್ನನ್ನು ಅಡ್ಡ ಕಟ್ಟಿ ಹಲ್ಲೆ ನಡೆಸಿ ತನ್ನಲ್ಲಿದ್ದ 10 ಸಾವಿರ ರೂಒಪಾಯಿ ದೋಚಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಕುಪ್ಪೆ ಪದವು ನಿವಾಸಿ ಅಬ್ಬುಲ್ ರಹಿಮಾನ್ ಯಾನೆ ಮೋನು ಎಂಬವರು ಬಜಪೆ ಠಾಣೆಯಲ್ಲಿನ ಕೇಸು ದಾಖಲಿಸಿದ್ದಾರೆ.

ಕುಪೆಪದವು ಪೆಟ್ರೋಲ್ ಪಂಪಿಗೆ ಅಬ್ದುಲ್ ರಹಿಮಾನ್ ರಿಕ್ಷಕ್ಕೆ ಪೆಟ್ರೋಲ್ ಹಾಕಲು ತೆರಳುತ್ತದ್ದ ವೇಳೆ ಈ ಘಟನೆ ನಡೆದಿದೆ. ಕುಪ್ಪೆಪದವಿನ ನಿವಾಸಿಗಳಾದ ಶೇಕ್ ಅಬ್ದುಲ್ಲಾ,ಸಾಹುಲ್ ಹಮೀದ್ ಯಾನೆ ಅಮ್ಮಿ, ಅಬ್ದುಲ್ ಹಕೀಂ ಮತ್ತು ಎನ್, ಎ, ಖಾದರ್ ಯಾನೆ ಸೋಫಾ ಖಾದರ್ ಎಂಬವರು ನನ್ನನ್ನು ಅಡ್ಡ ಗಟ್ಟಿ ನನ್ನ ಮೇಲೆ ಹಲ್ಲೆನಡೆಸಿ ತನ್ನಲ್ಲಿದ್ದ ಹತ್ತು ಸಾವಿರ ಹಣವನ್ನು ಕಸಿದು ನಿನ್ನ ತಮ್ಮ ರಜಾಕ್‍ಗೆ ಬುದ್ದಿ ಹೇಳು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಅಬ್ದುಲ್ ರಹಿಮಾನ್ ಹೇಳಿದ ದೂರಿನಲ್ಲಿ ಆರೋಪಿಸಲಾಗಿದೆ.ಬಜಪೆ ಪೊಲೀಸರು ಈ ನಾಲ್ವರ ವಿರುದ್ದ ಎಪ್ ಐ ಆರ್ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *