ಮೈತ್ರೇಯೀ ಗುರುಕುಲದಲ್ಲಿ ಅರ್ಧಮಂಡಲೋತ್ಸವದ ನಿಮಿತ್ತ ಆ.18 ಶನಿವಾರ ನಡೆದ ಸಂಸ್ಕೃತ ಅಧ್ಯಾಪಕರ ಸಮಾವೇಶವನ್ನು ಉಜಿರೆ ಎಸ್.ಡಿ.ಎಮ್ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀಧರ್ ಭಟ್ ಉದ್ಘಾಟಿಸಿದರು.

????
“ಸಂಸ್ಕೃತ ಬೋಧನೆ ಹಾಗೂ ಅದರ ಅನುಷ್ಠಾನದ ಮೂಲಕ ಸಂಸ್ಕೃತದ ರಕ್ಷಣೆ ಮತ್ತು ತನ್ಮೂಲಕ ಸಂಸ್ಕೃತಿಯ ರಕ್ಷಣೆ ಸಾಧ್ಯ. ಭಾಷೆ ಹಾಗೂ ಸಂಸ್ಕೃತಿ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದರಲ್ಲಿ ಶಿಥಿಲತೆ ಕಂಡುಬಂದಲ್ಲಿ ಇನ್ನೊಂದರ ಅವಸಾನವೂ ನಿಶ್ಚಿತ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಸಂಸ್ಕೃತ ರಕ್ಷಣೆಗೆ ದೃಢವಾದ ಮನಸ್ಸು ಬೇಕು, ಆಳವಾದ ಅಧ್ಯಯನವೂ ಜೊತೆಗಿರಬೇಕು. ಆಧುನಿಕತೆಯ ಗಾಳಿ ಬೀಸುತ್ತಿರುವ ಈ ಸಮಯದಲ್ಲಿ ಯುವಜನತೆ ಸಂಸ್ಕೃತಿಯನ್ನು ಮರೆತಿದೆ. ಅದನ್ನು ಮತ್ತೆ ತರಬೇಕಾದರೆ ಸಂಸ್ಕೃತಕ್ಕೆ ಮರಳಬೇಕು” ಎಂದು ಕಿವಿಮಾತನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ವೇದವಿಜ್ಞಾನ ಗುರುಕುಲದ ಪ್ರಾಚಾರ್ಯರಾದ ಡಾ|| ಮಹಾಬಲೇಶ್ವರ ಭಟ್ ಇವರು ಉಪಸ್ಥಿತರಿದ್ದು ಅಧ್ಯಾಪಕರಲ್ಲಿ ವಿದ್ವತ್ತೆ, ನೀತಿಮತ್ತೆ ಮತ್ತು ಶಾಸನಕ್ಷಮತೆ ಇದ್ದಲ್ಲಿ ಅವರು ಉತ್ತಮ ಸುಸಂಸ್ಕೃತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ತಯಾರಿಸಬಲ್ಲರು. ಅಂಥವರೇ ನಿಜವಾದ ಗುರುಗಳೆನಿಸುತ್ತಾರೆ ಎಂದು ಪ್ರಾಧ್ಯಾಪಕರಿಗೆ ಮಾರ್ಗದರ್ಶನವನ್ನಿತ್ತರು.

????
ಸಮಾವೇಶದ ದಿನದಂದೇ ಗುರುಕುಲದ ಕೆಲವು ವಿದ್ಯಾರ್ಥಿನಿಯರು ತಾವು ಕಲಿತ ಅಮರಕೋಶ, ಭಗವದ್ಗೀತೆ ಹಾಗೂ ಸಂಸ್ಕೃತ ಕ್ರಿಯಾಪದಗಳ ಕಂಠಪಾಠ ಪರೀಕ್ಷೆಯನ್ನು ಕೊಟ್ಟರು.
ಪ್ರಾಧ್ಯಾಪಕರಾದ ಶ್ರೀಶ ಕುಮಾರ್, ಕೃಷ್ಣ ಭಟ್ ಹಾಗೂ ಮಧುಕೇಶವ ಶಾಸ್ತ್ರೀ ಇವರು ಪರೀಕ್ಷಕರಾಗಿದ್ದರು.ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ, ಕಾಸರಗೋಡು ಪ್ರಾಂತದ ಸುಮಾರು 35 ಜನ ಸಂಸ್ಕೃತ ಶಿಕ್ಷಕರು ಭಾಗವಹಿಸಿದ್ದರು. ಗುರುಕುಲದ ಆಚಾರ್ಯ ಉಮೇಶ್ ಹೆಗಡೆ ಪ್ರಸ್ತಾವಿಸಿದರು. ಮಾತೃಶ್ರೀ ಶ್ರುತಿ ಸ್ವಾಗತ ಕೋರಿದರು. ಮಾತೃಶ್ರೀ ವಂದಿಸಿದರು ಮತ್ತು ಮಾತೃಶ್ರೀ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ವೇದಘೋಷದ ಮೂಲಕ ಆರಂಭಗೊಂಡ ಕಾರ್ಯಕ್ರಮವು ಶಾಂತಿಮಂತ್ರದೊಂದಿಗೆ ಮುಕ್ತಾಯವಾಯಿತು.

By suddi9

Leave a Reply

Your email address will not be published. Required fields are marked *