ಮೂಡುಬಿದಿರೆ: ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್ (ಎಂಐಟಈ) ಮೂಡುಬಿದಿರೆ ಮತ್ತು ಐಇಇಇ ಮಂಗಳೂರು ಉಪ ವಿಭಾಗ ಜಂಟಿಯಾಗಿ ಆಗಸ್ಟ್ ೧೩-14 ರಂದು ಆಯೋಜಿಸಿರುವ ‘ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ವಿಎಲ್ಎಸ್ಐ, ಎಲೆಕ್ಟ್ರಿಕಲ್ ಸರ್ಕ್ಯುಟ್ಸ್ ಅಂಡ್ ರೋಬೊಟಿಕ್ಸ್’ (ಡಿಸ್ಕವರ್ 2018) ನ ಎರಡು ದಿನದ ಅಂತರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ಆಗಸ್ಟ್ ೧೩ ರಂದು ಒIಖಿಇ ಕ್ಯಾಂಪಸ್, ಮೂಡಬಿದಿರೆಯಲ್ಲಿ ನಡೆಯಿತು.

MITE (1)
ತಾಂತ್ರಿಕ ಪರಿಣತರು, ಶಿಕ್ಷಣತಜ್ಞರು, ವಿಶ್ಲೇಷಕರು, ಸಂಶೋಧಕರು ಮತ್ತು ಉದ್ಯಮವನ್ನು ಒಗ್ಗೂಡಿಸುವ ಗುರಿಯೊಂದಿಗೆ ನಡೆಸಲಾದ ಈ ಸಮಾವೇಶ ಡಿಸ್ಟ್ರಿಬ್ಯುಟೆಡ್ ಕಂಪ್ಯೂಟಿಂಗ್, ವಿಎಲ್ಎಸ್ಐ, ಎಲೆಕ್ಟ್ರಿಕಲ್ ಸರ್ಕ್ಯುಟ್ಸ್, ಮತ್ತು ರೊಬೊಟಿಕ್ಸ್ನ ವಿವಿಧ ಕ್ಷೇತ್ರಗಳಲ್ಲಿ ಇತ್ತೀಚಿನ ಪ್ರವೃತ್ತಿಯ ಬಗ್ಗೆ ತಿಳುವಳಿಕೆ ಕೊಡುವುದನ್ನು ಉದ್ದೇಶಿಸಿತ್ತು . ಇದಲ್ಲದೆ, ಸಮ್ಮೇಳನವು ಹೆಚ್ಚು ಶೈಕ್ಷಣಿಕ ಮತ್ತು ಕೈಗಾರಿಕಾ ಪರಸ್ಪರ ಸಂವಹನ ಮತ್ತು ಸಹಯೋಗದ ಸಂಶೋಧನೆಯನ್ನು ಉತ್ತೇಜಿಸುತ್ತದೆ.

ಸಮ್ಮೇಳನವನ್ನು ಉದ್ಘಾಟಿಸಿದ , ಸಿಂಗಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನ ಪ್ರೊಫೆಸರ್ ಡಾ. ತುಳಿಕಾ ಮಿತ್ರ, ಸಮ್ಮೇಳನಗಳು ಯುವ ಬೋಧಕರಿಗೆ ಮತ್ತು ಸಂಶೋಧಕರಿಗೆ ನೀಡುವ ಉತ್ತಮ ಅವಕಾಶಗಳ ಬಗ್ಗೆ ಮಾತನಾಡಿದರು. ರಾಜೇಶ್ ಚೌಟ, ಅಧ್ಯಕ್ಷ, ರಾಜಲಕ್ಷ್ಮಿ ಎಜುಕೇಶನ್ ಟ್ರಸ್ಟ್, ಮಂಗಳೂರು ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುಣಮಟ್ಟ ಸಂಶೋಧನೆಯ ಅಗತ್ಯವನ್ನು ಒತ್ತಿಹೇಳಿದರು. ಪ್ರಪಂಚದ ವಿಭಿನ್ನ ಭಾಗಗಳಿಂದ ಬಂದ ಸಂಶೋಧಕರಿಗೆ ಸಂವಹನ ನಡೆಸಲು ಇದೊಂದು ಉತ್ತಮ ವೇದಿಕೆ ರಚಿಸುವ ಮೂಲಕ ಪ್ರಮುಖ ಆವಿಷ್ಕಾರಗಳಲ್ಲಿ ಸಮ್ಮೇಳನಗಳು ನಡೆಸುವ ಪಾತ್ರಗಳ ಬಗ್ಗೆ ಅವರು ಮಾತನಾಡಿದರು.

ಕಾನ್ಫರೆನ್ಸ್ ಅಧ್ಯಕ್ಷರಾದ ಮತ್ತು ಓಒಂಒIಖಿ ನಿಟ್ಟೆ ಪ್ರಾಂಶುಪಾಲರಾದ ಡಾ. ನಿರಾಂಜನ್ ಎನ್ ಚಿಪ್ಲುನ್ಕರ್, ಐಇಇಇ ಮಂಗಳೂರಿನ ಉಪವಿಭಾಗದ ಚಟುವಟಿಕೆಗಳ ಕುರಿತು ಮಾತನಾಡಿದರು. ಹಾಗೆಯೇ ಅವರು ಡಿಸ್ಕವರ್ ಸಮ್ಮೇಳನದ ಬಗ್ಗೆ ವಿವರಿಸಿದರು. ಡಾ. ಅಣ್ಣಪ್ಪ ಬಿ, ಅಧ್ಯಕ್ಷರು, ಐಇಇಇ ಮಂಗಳೂರು ಉಪವಿಭಾಗ ಡಿಸ್ಕವರ್ 2018 ರ ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ಉದ್ಘಾಟನಾ ಸಮಾರಂಭದ ನಂತರ ಡಾ. ತುಳಿಕಾ ಮಿತ್ರರ ‘ಐಒಟಿ’ ವಿಷಯದ ಮೇಲೆ ಮುಖ್ಯ ಭಾಷಣ ಮಾಡಿದರು. ಡಾ. ಮಿತ್ರ ಐಒಟಿ, ತಂತ್ರಗಳು, ಮತ್ತು ಅದರ ಸವಾಲುಗಳ, ಹಾಗು ಇದರಿಂದ ಹೇಗೆ ಸ್ಮಾರ್ಟ್ ತಂತ್ರಅಂಶಗಳನ್ನು ಮಾಡುವುದು ಎಂಬುದರ ಬಗ್ಗೆ ಮಾತನಾಡಿದರು. ಸಮ್ಮೇಳನವು ಫ್ರಾನ್ಸ್, ಈಜಿಪ್ಟ್, ಸೌದಿ ಅರೆಬಿಯಾ, ಜಪಾನ್ ಮುಂತಾದ ದೇಶಗಳನ್ನೂ ಒಳಗೊಂಡಂತೆ ವಿವಿಧ ದೇಶಗಳ ಸಂಶೋಧಕರಿಂದ 120 ಪ್ರಬಂಧಗಳನ್ನೂ ಸ್ವೀಕರಿಸಿದೆ. ಹನಿವೆಲ್, ಸಿಸ್ಕೊ , ಇಂಟೆಲ್ ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳಿಂದಲೂ ಮತ್ತು ವಿವಿಧ ಸಂಸ್ಥೆಗಳಿಂದ ಪ್ರಬಂಧಗಳನ್ನು ಸ್ವೀಕರಿಸಲಾಗಿದೆ. ಎರಡು ಬಾರಿ ಡಬಲ್ ಬ್ಲಇಂಡೆಡ್ ವಿಮರ್ಶೆಗಳ ನಂತರ, ಪ್ರಸ್ತುತಿಗಾಗಿ ಕೇವಲ 50 ಪೇಪರ್ಗಳನ್ನು ಮಾತ್ರ ಸ್ವೀಕರಿಸಲಾಯಿತು; ಇದು ಎರಡು ದಿನಗಳ ಕಾನ್ಫರೆನ್ಸ್ನಲ್ಲಿ ಪ್ರಬಂಧನೆ ಮಂಡನೆ ಮಾಡಲಾಯಿತು.

MITE (2)

ನಂತರ, ಬಿಂಗ್ಹ್ಯಾಮ್ಟೋನ್ ವಿಶ್ವವಿದ್ಯಾಲಯ, ನ್ಯೂ ಯಾರ್ಕ್, ಯುಎಸ್ಏ , ಸಿಎಎಸ್ಎಫ್ನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸೋಸಿಯೇಟ್ ಡೈರೆಕ್ಟರ್ ಪ್ರೊಫೆಸರ್ ಅಲೋಕ್ ರಾಸ್ತೋಗಿ, ಮತ್ತೊಂದು ಪ್ರಮುಖ ವಿಷಯದ ಬಗ್ಗೆ ಭಾಷಣ ಪ್ರಸ್ತುತ ಪಡಿಸಿದರು. ಇದರ ನಂತರ ಸಂಶೋಧಕರು ಆಹ್ವಾನಿಸಿದ ಪೇಪರ್ ಪ್ರಸ್ತುತಿ ಮಾಡಲಾಯಿತು. ಆಗಸ್ಟ್ 14 ರಂದು, ಜಪಾನ್ ನ ರಿಟ್ಸುಮೈಕನ್ ವಿಶ್ವವಿದ್ಯಾನಿಲಯ ವಿದ್ಯುನ್ಮಾನ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಟಕೇಶಿ ಕುಮಾಕಿ, ಮತ್ತು ಸಾಂಖ್ಯ ಲ್ಯಾಬ್ಸ್ ಬೆಂಗಳೂರಿನ ಸಿ.ಒ.ಒ ಮತ್ತು ಸಹ-ಸಂಸ್ಥಾಪಕ ಡಾ.ವಿಶ್ವಕುಮಾರ ಕಾಯಾರ್ಗದ್ದೆ , ರೇಡಿಯೋ ಕಂಮ್ಯುನಿಕೇಷನ್ಸ್ ವಿಷಯದ ಬಗ್ಗೆ ಬಾಷಣ ಮಂಡಿಸಿದರು.
ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ ಪ್ರಮುಖ ಉದ್ಯಮಗಳೊಂದಿಗೆ ಒಡಂಬಡಿಕೆ ಹೊಂದಿದ್ದು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಉತ್ಕೃಷ್ಟತೆ ತೋರುತ್ತಿದೆ. ಕೈಗಾರಿಕೆಗಳು ಮತ್ತು ಜಾಗತಿಕ ಖ್ಯಾತಿಯ ಸಂಸ್ಥೆಗಳ ಸಹಯೋಗದೊಂದಿಗೆ ಉತ್ಕ್ರಷ್ಟ ಸಂಶೋಧನಾ ಚಟುವಟಿಕೆಗಳನ್ನು ನಡೆಸುವುದಕ್ಕೆ ಒತ್ತು ಕೊಡಲು ನ್ಯೂಯಾರ್ಕ್ ಯುಎಸ್ಎದ ಬಿಂಗಮ್ಟನ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಒIಖಿಇ ಪ್ರತಿ ವರ್ಷ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಐಇಇಇ ಮಂಗಳೂರಿನ ಉಪವಿಭಾಗದೊಂದಿಗೆ ಒIಖಿಇ ನಲ್ಲಿ ನಡೆಸಿದ ಡಿಸ್ಕವರ್ ೨೦೧೮ ಸಮ್ಮೇಳನ ಇದಕ್ಕೆ ಮತ್ತಷ್ಟು ಒಟ್ಟು ಕೊಟ್ಟಿದೆ.
ಒIಖಿಇ ಪ್ರಾಂಶುಪಾಲರಾದ ಡಾ. ಜಿ ಎಲ್ ಎಲ್ ಈಶ್ವರ ಪ್ರಸಾದ್, ಎಲ್ಲರನ್ನು ಸ್ವಾಗತಿಸಿದರು ಮತ್ತು ಪ್ರಾರಂಭದಿಂದಲೂ ಒಂದು ದಶಕದಲ್ಲಿ ಸಂಸ್ಥೆಯ ಬೆಳವಣಿಗೆಯ ಬಗ್ಗೆ ವಿವರಿಸಿದರು. ಡಾ. ಪಿ.ವಿ. ಭಟ್, ಮುಖ್ಯಸ್ಥರು, ಕಂಪ್ಯೂಟರ್ ಸೈನ್ಸ್ ವಿಭಾಗ, ಎಂಐಟಿಈ ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ಶ್ರೇಯ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *