ಮೂಡುಬಿದಿರೆ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಿಶನ್ ಇಂದ್ರ ಧನಸ್ಸು ಕಾರ್ಯಕ್ರಮವನ್ನು ಮೂಡುಬಿದ್ರೆಯ ಶಾಸಕ ಉಮಾನಾಥ್ ಎ. ಕೋಟ್ಯಾನ್‍ರವರು ಉದ್ಘಾಟಿಸಿ, ಸರಕಾರದಿಂದ ಆರೋಗ್ಯಕ್ಕೆ ಸಿಗುವ ಸೌಲಭ್ಯಗಳನ್ನು ಮುಟ್ಟಿಸುವುದರಲ್ಲಿ ಯಶಸ್ವಿಯಾಗಿರಿ ಎಂದು ಶುಭ ಕೋರಿದರು.

indra danassu (2)

indra danassu (1)
2 ವರ್ಷದ ಕೆಳಗಿನ ಲಸಿಕೆಗೆ ಬಿಟ್ಟುಹೋದ ಮಕ್ಕಳನ್ನು ಗುರುತಿಸಿ ಲಸಿಕೆಯನ್ನು ಹಾಕುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿ ಚಾಲನೆ ಕೊಟ್ಟರು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ| ನವೀನ್ ಕುಲಾಲ್, ಹಿರಿಯ ವೈದ್ಯಾಧಿಕಾರಿ ಡಾ| ಶಶಿಕಲಾ, ಪುರಸಭಾ ಸದಸ್ಯ ನ್ಯಾಯವಾದಿ ಎಂ. ಬಾಹುಬಲಿ ಪ್ರಸಾದ್, ಪ್ರಸಾದ್ ಕುಮಾರ್, ಲಕ್ಷ್ಮಣ ಪೂಜಾರಿ, ಬಿ,ಜೆ,ಪಿ ನಗರಾಧ್ಯಕ್ಷ ರಾಜೇಶ್ ಮಲ್ಯ, ಕಾರ್ಯದರ್ಶಿ ಹರೀಶ್ ಎಂ. ಕೆ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಜೋಯ್ಲಸ್ ವಿಲ್‍ಪ್ರೆಡ್ ಡಿಸೋಜ ಹಾಗೂ ಆಸ್ಪತ್ರೆಯ ಸಿಬ್ಭಂಧಿವರ್ಗ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಸುಶೀಲ ಸ್ವಾಗತಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *