ಮೂಡುಬಿದಿರೆ: ಮಂಗಳೂರು ನಗರ ಪೊಲೀಸ್ ಇಕೋನಾಮಿಕ್ ಮತ್ತು ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆ ಮತ್ತು ವಿಜಯಕರ್ನಾಟಕ ದಿನ ಪತ್ರಿಕೆ ನಡೆಸುತ್ತಿರುವ ಮಾದಕ ವ್ಯಸನ ಮುಕ್ತ ಮಂಗಳೂರು ಅಭಿಯಾನವು ಆಳ್ವಾಸ್ ಕಾಲೇಜಿನಲ್ಲಿ ಆ.13 ಸೋಮವಾರ ನಡೆಯಿತು.
ಜಗತ್ತಿನ ಬಹುತೇಕ ರಾಷ್ಟ್ರಗಳು ಮಾದಕ ವಸ್ತುಗಳ ಹಾವಳಿಯಿಂದ ತತ್ತರಿಸುತ್ತಿದ್ದು ಭಾರತವೂ ಇದರಿಂದ ಹೊರತಾಗಿಲ್ಲ. ಪಂಜಾಬ್‍ನಲ್ಲಿ ತೀವ್ರವಾಗಿದ್ದ ಮಾದಕ ವಸ್ತುವಿನ ಪೀಡೆ ಈಗ ಕೇರಳದಲ್ಲಿ ವ್ಯಾಪಕವಾಗಿ ಹರಡಿದ್ದು ಕರ್ನಾಟಕದಲ್ಲೂ ಇದರ ಜಾಲ ವಿಸ್ತಾರಗೊಳ್ಳುತ್ತಿದೆ. ಶಿಕ್ಷಣಕ್ಕೆ ಹೆಸರಾದ ಕರಾವಳಿ ಜಿಲ್ಲೆಗಳಲ್ಲಿ ಇದರ ಜಾಲ ವ್ಯಾಪಕವಾಗಿ ಹರಡಿದ್ದು ಯುವಜನತೆ ಇದರ ಬಗ್ಗೆ ಜಾಗೃತರಾಗಬೇಕು ಎಂದು ದೇರಳಕಟ್ಟೆ ಕ್ಷೇಮದ ಪೊರೆನ್ಸಿಕ್ಸ್ ತಜ್ಞ ಡಾ.ಮಹಾಬಲೇಶ್ ಶೆಟ್ಟಿ ಹೇಳಿದರು.
ಆಸಕ್ತಿ, ಕುತೂಹಲದಿಂದ ಸೇವನೆಗೆ ಆರಂಭಿಸಿ ಬಳಿಕ ಅದರ ದಾಸರಾಗುತ್ತಾರೆ. ಇದು ವ್ಯಕ್ತಿಯ ಬದುಕನ್ನು ಹಾಳು ಮಾಡುವುದಲ್ಲೆ ಇಡೀ ಕುಟುಂಬವನ್ನೇ ವಿನಾಶದ ಅಂಚಿಗೆ ತಳ್ಳುತ್ತದೆ. ಗಾಂಜಾ, ಅಫೀಮ್ ನಂತಹ ಮಾದಕ ವಸ್ತುಗಳನ್ನು ಸೇವಿಸದಿದ್ದರೂ ಮಾದಕ ವಸ್ತು ಸೇವಿಸಿದವರೊಂದಿಗೆ ನಿರಂತರ ಒಡನಾಟ ಅದರೊಂದಿಗೆ ಸಮಯ ಕಳೆಯುವುದರಿಂದ ಅದರ ಕುಎಉಹುಗಳು ನಮ್ಮ ಮೇಲೆಯೂ ಬೀಳಬಹುದು.
ಮಾದಕ ದ್ರವ್ಯ ಸೇವಿಸಿದ್ದು ಪತ್ರ ಯಾದಕಿ ಪೊಲೀಸರು ಕೇಸು ದಾಖಲಿಸಿದರೆ ಆರು ತಿಂಗಳು ಜೈಲು ಮತ್ತು ದಂಡಕ್ಕೆ ಒಳಗಾಗ ಬೇಕಾದೀತು. ಅಲ್ಲದೆ ಮುಂದಿನ ಉದ್ಯೋಗ ಪಡೆಯುವಲ್ಲಿಯೂ ತೊಂದರೆಯಾಗಬಹುದು. ಕಲಿಕೆಯ ಒತ್ತಡ ಅಥವಾ ಬೇರೆ ಯಾವುದೇ ಸಮಸ್ಯೆಗಳಿದ್ದಲ್ಲಿ ಪೋಷಕರು ಅಥವಾ ಶಿಕ್ಷಕರೊಂದಿಗೆ ಚರ್ಚಿಸಿ. ಪರಿಹರಿಸಿಕೊಳ್ಳಬೇಕೇ ಹೊರತು ಅದರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಒಳಗಾಗದಿರಿ ಎಂದು ಹೇಳಿದರು.
ಕ್ಷೇಮದ ಮಾನಸಿಕ ರೋಗಿ ಮಾತನಾಡಿ, ಮಾದಕ ದ್ರವ್ಯ ಸೇವನೆಯು ಮಾನಸಿಕ ಕಾಯಿಲೆಗೆ ಕಾರಣವಾಗುತ್ತದೆ. ಭವಿಷ್ಯದಲ್ಲಿ ಇದರಿಂದ ವಿದ್ಯಾಭ್ಯಾಸ ಕುಂಠಿತವಾಗುವುದಲ್ಲದೆ ಭವಿಷ್ಯದ ಕನಸುಗಳು ಕಮರುತ್ತವೆ. ಈ ಬಗ್ಗೆ ಜಾಗೃತರಾಗಿರಬೇಕು ಹಾಸ್ಟೇಲ್ ಕಾಲೇಜಿನಂತಹ ಪ್ರದೇಶಗಳಲ್ಲಿ ಮಾದಕ ವಸ್ತು ಜಾಲದ ಏಜೆಂಟರುಗಳು ಕಾರ್ಯಾಚರಿಸುವ ಸಾಧ್ಯತೆಯಿದ್ದು ಇದರ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸರಿಗೆ ಅಥವಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡುವಂತೆ ಅವರು ಕೋರಿ ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮವನ್ನು ವಿವರಿಸಿದರು.
ಮಂಗಳೂರು ಉತ್ತರ ವಿಭಾಗದ ಎಸಿಪಿ ರಾಜೇಂದ್ರ ಮಾತನಾಡಿ, ಓದಿನೊಂದಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸಧೃಢರಾಗಲು ಸಾಧ್ಯ. ವಿದ್ಯಾರ್ಥಿಗಳು ಕಲಿಕೆಯಿಂದ ಹೊರತಾದ ಹೊರಗಿನ ಆಕರ್ಷಣೆಗಳಿಗೆ ಬಲಿಯಾಗಬಾರದೆಂದು ಹೇಳಿದರು.
ನಾಕೋಟಿಕ್ ಕ್ರೈಂ ಪೊಲೀಸ್ ವಿಭಾಗದ ಇನ್‍ಸ್ಟೆಕ್ಟರ್ ಮಹಮ್ಮದ್ ಶರೀಫ್ ಮಾತನಾಡಿ ಮಾದಕ ದ್ರವ್ಯ ಸೇವನೆಯ ಕುರಿತಾದ ಕಾನೂನು ಕ್ರಮಗಳು ಮತ್ತು ಪೊಲೀಸ್ ಆ್ಯಪ್‍ನ ಬಗ್ಗೆ ಮಾಹಿತಿ ನೀಡಿದರು.
ಮೂಡುಬಿದಿರೆ ಇನ್‍ಸ್ಪೆಕ್ಟರ್ ರಾಮಚಂದ್ರ ನಾಯಕ್ ಮಾತನಾಡಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೋ. ಕುರಿಯನ್ ಅಧ್ಯಕ್ಷತೆ ವಹಿಸಿದ್ದರು.
ವಿಜಯ ಕರ್ನಾಟಕದ ಹಿರಿಯ ಉಪ ಸಂಪಾದಕ ರವೀಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಮಾದಕ ದ್ರವ್ಯ ವಿರೋಧಿಅಭಿಯಾನದ ಬಗ್ಗೆ ಪತ್ರಿಕೆಯ ಧ್ಯೇಯೋದ್ದೇಶಗಳನ್ನು ವಿವರಿಸಿದ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋಧಿಸಿದರು.
ರೆಸ್ಪಾನ್ಸ್ ವಿಭಾಗದ ಸಹ ಪ್ರಬಂಧಕ ಅರವಿಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

