ವಿಟ್ಲ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್ ಕೆ ಆಟ್ರ್ಸ್ ಸಹಕಾರದಿಂದ ಆಟಿದ ಆಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗನ್ನಾಥ ಕಾಸರಗೋಡು, ಎಸ್.ಡಿ.ಎಂ.ಸಿ ಅಧ್ಯಕ್ಷರು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ, ಭವ್ಯ ಪಿ ಆರ್., ಚಂದಳಿಕೆ ಶಾಲಾ ಮುಖ್ಯೋಪಾಧ್ಯಾಯರಾದ ವಿಶ್ವನಾಥ ಗೌಡ ಬಿ, ಎಸ್.ಡಿ.ಎಂ.ಸಿ ಸದಸ್ಯರಾದ ಸಮೀರ್ ವಿಟ್ಲ, ಬಿ.ಆರ್.ಪಿ. ನಾರಾಯಣ ಗೌಡ, ಕೃಷ್ಣಯ್ಯ ವಿಟ್ಲ, ಸಿಆರ್ ಪಿ ರವಿಪ್ರಸಾದ್, ಸುಮತಿ ಪ್ರಮೋದ್ , ಆರ್ ಕೆ ಆಟ್ರ್ಸ್‍ನ ರಾಜೇಶ್ ವಿಟ್ಲ ಉಪಸ್ಥಿತರಿದ್ದರು.
ಆರ್ ಕೆ ಆಟ್ರ್ಸ್‍ನ ಭವ್ಯ ವೇದಿಕೆ, ಆಟಿಕಳೆಂಜ, ಮಕ್ಕಳಿಂದ ನೃತ್ಯವೈವಿದ್ಯ, ಪಾಡ್ದನ , ತುಳು ಹಾಡುಗಳು ಎಲ್ಲರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಆಟಿ ತಿಂಗಳ ಪ್ರಮುಖ ಖಾದ್ಯ ತಿಂಡಿಗಳ ಪರಿಚಯ ಮಾಡಿಕೊಡಲಾಯಿತು. ಕೆಸರ್‍ಡೊಂಜಿ ದಿನ ಕಾರ್ಯಕ್ರಮದಲ್ಲಿ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಎಚ್ ಸ್ವಾಗತಿಸಿದರು. ಕೆ ಬಹುಮಾನಿತರ ಪಟ್ಟಿ ವಾಚಿಸಿದರು. ರಶ್ಮಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಎನ್ ವಂದಿಸಿದರು.

