ವಿಟ್ಲ: ಶ್ರೀ ಭಗವತಿ ದೇವಸ್ಥಾನದಲ್ಲಿ ಯಕ್ಷ ಭಾರತ ಪ್ರತಿಷ್ಠಾನದ ವತಿಯಿಂದ ಯೋಗಾಭ್ಯಾಸ ಮತ್ತು ಧ್ಯಾನ ತರಬೇತಿಯು ಸತತ 4 ವರ್ಷಗಳಿಂದ ನಡೆಯುತ್ತಿದೆ.

ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ ಯೋಗಗುರು ಆನಂದ ಶೆಟ್ಟಿ ಯವರ ನೇತೃತ್ವದಲ್ಲಿ ಪ್ರಾರಂಭಗೊಂಡ ಈ ತರಬೇತಿಯನ್ನು ಯಕ್ಷ ಭಾರತ ದ ಅಧ್ಯಕ್ಷ ಸಂಜೀವ ಪೂಜಾರಿಯವರು ನಡೆಸುತ್ತಿದ್ದಾರೆ.

