ಬಂಟ್ವಾಳ: ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ಉಪನಿರೀಕ್ಷಕ ರಾಗಿ ಸೇವೆ ಸಲ್ಲಿಸಿದ ಯಲ್ಲಪ್ಪ ಅವರು ವಿಟ್ಲ ಪೋಲೀಸ್ ಸ್ಟೇಷನ್ ಗೆ ವರ್ಗಾವಣೆ ಗೊಂಡ ಇವರಿಗೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

yallappa-bilkoduge (1)
ಇದೇ ಸಂದರ್ಭದಲ್ಲಿ ಮಂಗಳೂರು ಡಿ.ಅಇ.ಅರ್.ಬಿ.ಯಿಂದ ಮೆಲ್ಕಾರ್ ಟ್ರಾಫಿಕ್ ಠಾಣೆಗೆ ಎಸ್ ಐ ಆಗಿ ನಿಯೋಜನೆಗೊಂಡ ಮಂಜುಳಾ ಅವರನ್ನು ಸ್ವಾಗತಿಸಲಾಯಿತು.
ಕಾರ್ಯ ಕ್ರಮದ ಅದ್ಯಕ್ಷ ತೆಯನ್ನು ವಹಿಸಿದ್ದ ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರು ಮಾತನಾಡಿ, ಸಾರ್ವಜನಿಕ ರ ಸೇವೆ ಮಾಡಲು ಪೋಲೀಸ್ ಇಲಾಖೆ ನಮಗೆ ಸಿಕ್ಕಿ ರುವ ದೊಡ್ಡ ಅವಕಾಶ . ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಪ್ರಾಮಾಣಿಕ ರಾಗಿ ಕೆಲಸ ಮಾಡಿದಾಗ ಪೋಲೀಸರ ಮೇಲಿರುವ ಉತ್ತಮಭಾವನೆಗಳು ಮತ್ತಷ್ಟು ಗಟ್ಟಿ ಯಾಗುತ್ತದೆ . ಅಸಹಾಯಕ ರಿಗೆ ಸಹಾಯ ಮಾಡುವ ಪೋಲೀಸರು ನಾವು ಅಗಬೇಕು ಎಂದರು. ಶಾಲಾ ವಿದ್ಯಾರ್ಥಿಗಳಿಗೆ ಪೋಲೀಸ್ ಬಗ್ಗೆ ನಿಯಮಗಳ ಬಗ್ಗೆ ಮಾಹಿತಿ ನೀಡಿದಾಗ ಬದಲಾವಣೆ ಸಾಧ್ಯ ಈ ಎಲ್ಲವನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.

yallappa-bilkoduge (2)

ಈ ಕಾರ್ಯಕ್ರಮ ದಲ್ಲಿ ನಗರ ಠಾಣಾ ಎಸ್ .ಐ.ಚಂದ್ರಶೇಖರ್, ಅಪರಾಧ ವಿಭಾಗ ದ ಎಸ್.ಐ.ಹರೀಶ್, ಎ.ಎಸ್.ಐ.ಬಾಲಕ್ರಷ್ಣ, ಸಿಬ್ಬಂದಿ ಗಳಾದ ಕ್ರಷ್ಣ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *