ಬಂಟ್ವಾಳ: ಕರ್ನಾಟಕ ರಾಜ್ಯ ಕರಾವಳಿ ಕುಲಾಲ, ಕುಂಬಾರ ಯುವ ವೇದಿಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಹಾಗೂ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ವಿಧಾನ ಸಭೆ ಕ್ಷೇತ್ರ ಇದರ ಜಂಟಿ ಆಶ್ರಯದಲ್ಲಿ ಕೆಸರ್ದ ಕಂಡೊಡು ಕುಸೆಲ್ದ ಗೊಬ್ಬುಲು – ಎಸಲ್ ರಡ್ಡ್ ಕಾರ್ಯಕ್ರಮ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಭವನ ವಠಾರದಲ್ಲಿ ಆ. 12 ಭಾನುವಾರದಂದು ನಡೆÀಯಲಿದೆ.
ಕಾರ್ಯಕ್ರಮವನ್ನು ಬೆಳಿಗ್ಗೆ 8.30ಕ್ಕೆ ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನ ನಡುಬೊಟ್ಟು ಇಲ್ಲಿನ ಧರ್ಮದರ್ಶಿ ರವಿ ನಡುಬೊಟ್ಟು ಉದ್ಘಾಟಿಸಲಿದ್ದಾರೆ. ತಥಾಗತ್ ಹೃದಯ ಆಸ್ಪತ್ರೆ ಬೆಂಗಳೂರು ಮತ್ತು ಅಧ್ಯಕ್ಷರು ಕುಲಾಲರ (ಒಡೆಯರ) ಮಹಾಸಂಘ ಬೆಂಗಳೂರು ಇದರ ನಿರ್ದೇಶಕ ಡಾ| ಶ್ರೀನಿವಾಸ್ ಇವರು ಕುಲಾಲ ಕುಂಬಾರ ಯುವ ವೇದಿಕೆ ದಶಮಾನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಉಳ್ತೂರು, ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ರಾಜ್ಯಾಧ್ಯಕ್ಷ ತೇಜಸ್ವಿರಾಜ್, ಯುವ ವೇದಿಕೆಯ ಜಿಲ್ಲಾಧ್ಯಕ್ಷ ಜಯೇಶ್ ಗೋವಿಂದ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಡಿ.ಎಂ.ಕುಲಾಲ್, ಉದ್ಯಮಿ ಅನಿಲ್‍ದಾಸ್, ರಾಜ್ಯ ಟೈಲರ್ಸ್ ಅಸೋಸಿಯೇಷನ್‍ನ ಉಪಾಧ್ಯಕ್ಷ ಸುರೇಶ್ ಟೈಲರ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಯಶೋಧ ಕೃಷ್ಣಪ್ಪ ಭಾಗವಹಿಸಲಿದ್ದಾರೆ.
ಚದುರಂಗ ಸ್ಪರ್ಧೆಯಲ್ಲಿ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ವಿಜೇತೆ ಯಶಸ್ವಿ ಮೂಲ್ಯ ಕಡೇಶಿವಾಲಯ, ಸಮಾಜ ಸೇವಕ ಕಮಲಾಕ್ಷ ಮೊಗರ್ನಾಡು ಪ್ರಗತಿಪರ ಕೃಷಿಕರಾದ ಕೊರಗಪ್ಪ ಮೂಲ್ಯ ಅವರಿಗೆ ಸನ್ಮಾನ ನಡೆಯಲಿದೆ.
ಪೂರ್ವಾಹ್ನ ಫಲಾಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
ಸಮಾರೋಪ ಸಮಾರಂಭವು ಸಂಜೆ 5.30 ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಸೌಂದರ್ಯ ರಮೇಶ್ ಕಟೀಲು, ಯುವ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ನಡೂರು, ಬೀಡಿ ಉದ್ಯಮಿ ಗಂಗಾಧರ ಶೇರಾ, ಗೌತಮ್ ಜಿ. ಕುಲಾಲ್ ಭಾಗವಹಿಸಲಿದ್ದಾರೆ.
ಕೆಸರು ಗದ್ದೆಯಲ್ಲಿ ಏಳು ವಿಭಾಗದಲ್ಲಿ 32ಕ್ಕಿಂತಲೂ ಹೆಚ್ಚು ಸ್ಪರ್ಧೆಗಳು ನಡೆಯಲಿದ್ದು, ತಾಲೂಕಿನ ಕುಲಾಲ ಕ್ರೀಡಾ ಪಟುಗಳು, 1000ಕ್ಕಿಂತಲೂ ಹೆಚ್ಚು ಕ್ರೀಡಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಗುಂಪು ಸ್ಪರ್ಧೆಗಳಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ ಹಾಗೂ ಉಳಿದಂತೆ ಕ್ರೀಡಾ ಸ್ಮರಣಿಕೆಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
