ಪುತ್ತೂರು: ಪುತ್ತೂರಿನ ನೆಲ್ಲಿಕಟ್ಟೆಯ ಅಭಿಮಾನ್ ಬಾರ್ ಎದುರುಗಡೆ ನಿಲ್ಲಿಸಿದ ಕೆ.ಗಿರಿಧರ್ ರಾವ್ ಎಂಬುವವರ ಮೋಟಾರ್ ಸೈಕಲ್ ನಂ. ಏಂ 21 ಘಿ6066 ಆ.1ರಂದು ಸಂಜೆ ಸುಮಾರು 6 ಗಂಟೆಯ ವೇಳೆ ಕಳವಾಗಿದೆ.

robbery motorcycle
ನಗರ ಠಾಣಾ ಪೊಲೀಸ್ ನಿರೀಕ್ಷಕರ ಮಾರ್ಗದರ್ಶನದಂತೆ ಪಿಎಸ್‍ಐ ಅಜಯ್ ಕುಮಾರ್ ಡಿ.ಎನ್, ಪಿಎಸ್‍ಐ ಓಮನಾ,ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಧರ ಮಣಿಯಾಣಿ,ಹೆಚ್ ಸಿ 1107 ಜಯರಾಮ, ಹೆಚ್ ಸಿ 342 ಮಂಜುನಾಥ,ಹೆಚ್ ಸಿ 665 ಜಗದೀಶ್ ,ಪಿಸಿ 2354 ದಿನೇಶ್ ನೇತೃತ್ವದ ತಂಡ ಆರೋಪಿ ಉದೈಫ್ ಯಾನೆ ಉದ್ದಿ (21) ಎಂಬುವವನನ್ನು ಬಂಧಿಸಿದ್ದಾರೆ.
ಈತ ಮೂಲತಃ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಮನೆ ನಿವಾಸಿಯಾಗಿದ್ದಾನೆ. ಆತನ ಬಳಿಯಿದ್ದ ಕೆಎ19ಎಚ್6955 ಮತ್ತು ಕೆಎ21ಎಕ್ಸ್6066 ಸಂಖ್ಯೆಯ ಮೋಟಾರು ಸೈಕಲ್ ಗಳನ್ನು ಸ್ವಾಧೀನ ಪಡಿಸಲಾಗಿದೆ.
ಈ ಹಿಂದೆ ಆರೋಪಿಯ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ 2 ಪ್ರಕರಣ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 1 ಪ್ರಕರಣ ಹಾಗೂ ಬೆಳ್ಳಾರೆ ಠಾಣೆಯಲ್ಲಿ 2 ಪ್ರಕರಣ ಒಟ್ಟು 5 ಪ್ರಕರಣಗಳು ದಾಖಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮಾನ್ಯ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

By suddi9

Leave a Reply

Your email address will not be published. Required fields are marked *