ನೀರುಮಾರ್ಗ: ತನ್ನ ಆತ್ಮ ಸ್ನೇಹಿತೆಯೋರ್ವಳ ಸಾವಿನಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈಕೆಯನ್ನು ಮಂಗಳೂರಿನ ಕೆನರಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ಎಂದು ಗುರುತಿಸಲಾಗಿದೆ.

ಈಕೆ ಅರಣ್ಯ ಸಂಚಾರಿ ಪೊಲೀಸ್ ದಳದ ಉಮೇಶ್ ಹೊಸೊಳಿಕೆ ಹಾಗೂ ಕದ್ರಿ ಠಾಣೆಯ ಎಎಸ್ಸೈ ಕಮಲಾಕ್ಷಿ ದಂಪತಿಯ ಪುತ್ರಿ. ಈಕೆ ಸಹೋದರ ಹಾಗೂ ತಂದೆ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
